September 6, 2026
ಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ಹೊಸ ಪ್ರಯತ್ನವೊಂದಕ್ಕೆ ಹೆಜ್ಜೆ, ಬೆಳ್ತಂಗಡಿ ನೈಟ್ಸ್ – 2025 , ಫುಡ್ ಫೆಸ್ಟಿವಲ್ ಮತ್ತು ಮ್ಯೂಸಿಕಲ್ ನೈಟ್

ಬೆಳ್ತಂಗಡಿ: ಮ್ಯೂಸಿಕ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದ್ರಲ್ಲೂ ವಿಶೇಷ ತಿನಿಸುಗಳ ಜೊತೆ ಹಾಯಾದ ಸಂಗೀತ, ಮನಮೆಚ್ಚುವ ಸ್ಟಾರ್ಸ್, ವಿಶೇಷ ಕಾರ್ಯಕ್ರಮಗಳು ಎಲ್ಲವೂ ಜೊತೆಯಾದ್ರೆ ಹಬ್ಬವೇ ಸರಿ.


ಹಾಗಾಗಿ ಬೆಳ್ತಂಗಡಿ ತಾಲೂಕಿನ ಜನತೆಗೆ ಸಂಗೀತ ಮತ್ತು ವಿಶೇಷ ತಿನಿಸುಗಳ ರಸದೌತಣವನ್ನ ಒಟ್ಟೊಟ್ಟಿಗೆ ಉಣಬಡಿಸಲು ಸಿದ್ದವಾಗಿದೆ ಬೋಧಿ ಪ್ರೊಡಕ್ಷನ್ಸ್. ದಸ್ಕತ್ ಚಿತ್ರದ ಮೂಲಕ ಮನೆ ಮಾತಾಗಿರುವ ಬೋಧಿ ಪ್ರೊಡಕ್ಷನ್ ಈಗಾಗ್ಲೆ ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರ, ಮಾಯೆ, ವನಜಾ, ಕಸರತ್ತ್ ರಂತಹ ಯಶಸ್ವಿ ವೆಬ್ ಸಿರೀಸ್ ಗಳನ್ನ, ಮತ್ತು ಹಲವಾರು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ ಅನುಭವ ಇರುವವರನ್ನ ಒಳಗೊಂಡ ಸಮರ್ಥ ತಂಡವಾಗಿದ್ದು ಇದೀಗ ಬೆಳ್ತಂಗಡಿಯಲ್ಲಿ ಹೊಸ ಪ್ರಯತ್ನವೊಂದಕ್ಕೆ ಹೆಜ್ಜೆ ಇಟ್ಟಿದ್ದು ಬೆಳ್ತಂಗಡಿ ನೈಟ್ಸ್ – 2025 , ಫುಡ್ ಫೆಸ್ಟಿವಲ್ ಮತ್ತು ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿಗೆ ಸ್ವಾಗತ ಎನ್ನುವ ಬರಹದೊಂದಿಗೆ ಎಲ್ಲರಿಗೂ ಸ್ವಾಗತ ಕೋರಿ ಆಕರ್ಷಕವಾಗಿರುವ ಪೋಸ್ಟರ್ ನ್ನು ತಂಡ ಬಿಡುಗಡೆಗೊಳಿಸಿದ್ದು ಇದರ ಅಧಿಕೃತ ಸ್ಥಳ ಮತ್ತು ದಿನಾಂಕವನ್ನು ತಂಡವು ಇನ್ನಷ್ಟೇ ಘೋಷಿಸಬೇಕಿದೆ. ಈ ಹೊಸ ಪ್ರಯತ್ನವು ಬೆಳ್ತಂಗಡಿ ತಾಲೂಕಿನ ಖಾದ್ಯಪ್ರಿಯರಲ್ಲಿ ಮತ್ತು ಸಂಗೀತಪ್ರಿಯರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು ಏನೆಲ್ಲಾ ವಿಶೇಷತೆಗಳು ಇರಬಹುದೆಂದು ಲೆಕ್ಕಾಚಾರ ಆರಂಭವಾಗಿದೆ‌.


ಬೆಳ್ತಂಗಡಿ ತಾಲೂಕಿನಲ್ಲೆ ಮೊದಲ ಬಾರಿಗೆ ಫುಡ್ ಫೆಸ್ಟಿವಲ್ ಆಯೋಜನೆಯಾಗುತಿದ್ದು ತಂಡದ ಪ್ರಯತ್ನಕ್ಕೆ ಕಾರ್ಯಕ್ರಮಕ್ಕೆ ಸುದ್ದಿ ಉದಯ ಶುಭಾಶಯ ಕೋರುತ್ತಿದೆ.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ

Suddi Udaya

ಗುರುವಾಯನಕೆರೆ: ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ ಬಸ್ಸು, ಟ್ರಾಫಿಕ್ ಜಾಮ್

Suddi Udaya

ಎಳನೀರಿನಲ್ಲಿ ಮೊಟ್ಟಮೊದಲ ಸಾಹಿತ್ಯ ಕಾರ್ಯಕ್ರಮ: ಸಾಹಿತ್ಯ ಮತ್ತು ಬದುಕು ವಿಷಯದ ಕುರಿತು ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ -ಚಾರ್ಮಾಡಿ ಅವೈಜ್ಞಾನಿಕ ಕಾಮಗಾರಿಯಿಂದ ಬೇಸತ್ತ ನಾಗರಿಕರು

Suddi Udaya

ತೆಂಕಕಾರಂದೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ

Suddi Udaya
error: Content is protected !!