September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 2025 ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ 22ನೇ ರಾಜ್ಯ ಮಟ್ಟದ ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭ ಆ.19 ರಂದು ಧರ್ಮಸ್ಥಳ ಮಹೋತ್ಸವ ಸಭಾ ಭವನದಲ್ಲಿ ನಡೆಯಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆಯನ್ನು ವಹಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಸಾಹಿತಿಗಳು ನಿರ್ದೇಶಕರು ಡಾ. ವಿ. ನಾಗೇಂದ್ರ ಪ್ರಸಾದ್ ಪುಸ್ತಕಗಳ ಲೋಕಾರ್ಪಣೆಗೊಳಿಸಿದರು. ಕಿರುತೆರೆ ಹಾಗೂ ಚಲನಚಿತ್ರ ನಟ ದತ್ತಣ್ಣ ಶುಭಾಶಂಸನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆ, ಡಿ. ಹಷೇ೯ಂದ್ರ ಕುಮಾರ್, ಸುಪ್ರೀಯ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.


ನಂತರ ಸ್ಪರ್ಧಾ ವಿಜೇತರಿಗೆ ಪುರಸ್ಕಾರ, ಕುಂಚ ಗಾನ ನೃತ್ಯ ವೈಭವ ನಡೆಯಿತು. ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ನೃತ್ಯ ಹಾಗೂ ಚಿತ್ರ ಕಲಾವಿದ ರಮೇಶ್ ಸಸಾನೂರು ಇವರಿಂದ ಕುಂಚ ಕಾಯ೯ಕ್ರಮ ನೇರವೇರಿಸಿದರು.
ವಿದೂಷಿ ಕು. ಸುಪ್ರೀತಾ ಪ್ರಾರ್ಥಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ| ಐ. ಶಶಿಕಾಂತ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ್ನಾಡಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವಿತ್ತರು. ಪುದುವೆಟ್ಟು ಶ್ರೀ ಧ.ಮಂ. ಅನುದಾನಿತ ಹಿ.ಪ್ರಾ, ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು.

Related posts

ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ: ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya

ಚಾರ್ಮಾಡಿ ಮಠದಮಜಲು ಹತ್ತಿರ ಇಂದ್ ಮರವನ್ನು ದೂಡಿ ಹಾಕಿದ ಆನೆ ವಿದ್ಯುತ್ ಫೀಡರ್ ಗೆ ಹಾನಿ: ದುರಸ್ತಿ ಪಡಿಸಿದ ಮೆಸ್ಕಾಂ ಇಲಾಖೆ

Suddi Udaya

ಹಳೆಪೇಟೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್ ಈದ್-ಉಲ್-ಫಿತರ್ ಆಚರಣೆ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರಾಗಿ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾಗಿ ಅಶೋಕ ಪಿ ಆಯ್ಕೆ

Suddi Udaya

ಕಡಿರುದ್ಯಾವರ: ಕೃಷಿ ತೋಟಗಳಿಗೆ ಕಾಡಾನೆ ದಾಳಿ

Suddi Udaya

ಮದ್ದಡ್ಕ ಸಮೀಪದ ನೇರಳಕಟ್ಟೆಯಲ್ಲಿ ಬೈಕ್ ಮತ್ತು ಅಕ್ಟೀವಾ ಡಿಕ್ಕಿ: ಸವಾರರು ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!