September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮರೋಡಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

ಮರೋಡಿ: ಮರೋಡಿ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್ ರವರ ಅಧ್ಯಕ್ಷತೆಯಲ್ಲಿ ಆ.22ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಣಿಶ್ರೀ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ. ಉಪಾಧ್ಯಕ್ಷ ಶುಭರಾಜ ಹೆಗ್ಡೆ, ಸದಸ್ಯರಾದ ಪದ್ಮಶ್ರೀ, ಯಶೋಧ, ಅಶೋಕ, ಉಮೇಶ, ಸುನಂದ, ಉಮಾವತಿ, ಧನಲಕ್ಷ್ಮೀ, ಸಮಿತ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂ. ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್. ಸ್ವಾಗತಿಸಿ, ವರದಿ ವಾಚಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭರಾಜ ಹೆಗ್ಡೆ ವಂದಿಸಿದರು.

Related posts

ಹಾಸನ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಶಿವಪ್ರಸಾದ್ ಅಜಿಲರಿಗೆ ಹೆಚ್ಚುವರಿ ಜವಾಬ್ದಾರಿ: ಇಂದು ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ ಪ.ಪಂ. ನಾಲ್ಕನೇ ವಾರ್ಡಿನ ಹಿಂದೂ ರುದ್ರ ಭೂಮಿಗೆ ರೂ 40 ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಜು.27: ದ.ಕ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲಾಧಿಕಾರಿ ಆದೇಶ

Suddi Udaya

ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿಗಳ ಭೇಟಿ

Suddi Udaya

ತಾಲೂಕು ಶಾಮಿಯಾನ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಸೇವಾಭಾರತಿ ಸೇವಾಧಾಮ ಆಶ್ರಯದಲ್ಲಿ ಪುತ್ತೂರುನಲ್ಲಿ ಗಾಲಿಕುರ್ಚಿ ಜಾಥಾ

Suddi Udaya
error: Content is protected !!