September 6, 2026
ರಾಜಕೀಯ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಮಾಲಾಡಿ ಮತ್ತು ಸೋಣಂದೂರು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ

ಮಾಲಾಡಿ:ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 25 ರಂದು ನಡೆದ ಮಾಲಾಡಿ ಮತ್ತು ಸೋಣಂದೂರು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಮಾಲಾಡಿ ಕೊಲ್ಪೆದಬೈಲು ಎಸ್.ಕೆ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಶ್ರೀ ಲಿಂಗಪ್ಪ ಟೈಲರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪಕ್ಷದ ಹಿರಿಯ ಕಾರ್ಯಕರ್ತರಾದ ಶ್ರೀ ಪದ್ಮನಾಭ ಶೆಟ್ಟಿ ಅರ್ಕಜೆ ಉದ್ಘಾಟನಾ ಭಾಷಣ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹಿರಿಯ ಕಾರ್ಯಕರ್ತರು ನಿರ್ವಹಿಸಿದ ಪಾತ್ರದ ಬಗ್ಗೆ ತಿಳಿಸಿದರು . ಶಾಸಕರಾದ ಶ್ರೀ ಹರೀಶ್ ಪೂಂಜಾ ರವರು ಮಾತನಾಡಿ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ಕೃತವಾಗಿ ಸಮಾಲೋಚನೆ ನಡೆಸಿದರು. ಪ್ರಮುಖರಾದ ಶ್ರೀ ರವಿ ಇಳಂತಿಲ, ತಣ್ಣೀರು ಪಂಥ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಕಲ್ಲಾಪು , ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುಧೀರ್ ಸುವರ್ಣ ಬೈಠಕ್ ನೀಡಿದರು. ಈ ಸಂದರ್ಭದಲ್ಲಿ ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರ ಕಾಂತಗೌಡ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರದೀಪ್ ಶೆಟ್ಟಿ,ಜಿಲ್ಲಾ ಭಾಜಪ ಕಾರ್ಯದರ್ಶಿ ಶ್ರೀಮತಿ ವಸಂತಿ ಮಚ್ಚಿನ, ಮಡಂತ್ಯಾರ್ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ, ಸಿ ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜೋಯಲ್ ಮೆಂಡೋನ್ಸ, ಪಕ್ಷದ ಪ್ರಮುಖ ರಾದ ಶ್ರೀ ನಂದಕುಮಾರ್ ಪಂಚಾಯತ್ ಸದಸ್ಯರು, ಸಿ.ಎ. ಬ್ಯಾಂಕ್ ನಿರ್ದೇಶಕರು, ಹಾಲು ಉತ್ಪಾದಕರ ಸಂಘ ನಿರ್ದೇಶಕರು,ಜನಪ್ರತಿನಿಧಿಗ ಳು,ಬೂತ್ ಅಧ್ಯಕ್ಷ, ಕಾರ್ಯದರ್ಶಿ ಪದಾಧಿಕಾರಿಗಳು, ಅನನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.ಶ್ರೀ ದಿನೇಶ್ ಕರ್ಕೇರ ಸ್ವಾಗತಿಸಿ, ತಾಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಕೊಕ್ಕಡ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ

Suddi Udaya

ಅಲ್ಪಾವಧಿಯಲ್ಲಿ ದೊರೆತ ಅವಕಾಶ ಸದ್ಭಳಕೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರು ಬಿ.ಸಿ ನಾಗೇಶ್ :ಶಾಸಕ ಹರೀಶ್ ಪೂಂಜ

Suddi Udaya

ಮರೋಡಿ: ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಬಳ್ಳಾಲ್ ಕಾಂಗ್ರೇಸ್ ಸೇರ್ಪಡೆ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರದ ವಿರುದ್ದ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ; ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಬೃಹತ್ ಸಮಾವೇಶ

Suddi Udaya

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ವಿವಾದ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕರಾವಳಿ ಭಾಗದ ಶಾಸಕರು ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ

Suddi Udaya
error: Content is protected !!