22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಎಕ್ಸೆಲ್ ಪಿಯು ಕಾಲೇಜು ಸಹಭಾಗಿತ್ವದಲ್ಲಿ ಜೆಸಿಐ ಭಾರತದ ವಲಯ 15 ರ ಚಿಗುರು ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ಜೆಸಿಐ ಭಾರತದ ವಲಯ15 ರ ನೂತನ ಜೇಸಿಗಳಿಗೆ ಚಿಗುರು ತರಬೇತಿ ಕಾರ್ಯಾಗಾರ ಗುರುವಾಯನಕೆರೆಯ ಎಕ್ಸೆಲ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಜೆಸಿಐ ಬೆಳ್ತಂಗಡಿಯ ಆತಿಥ್ಯದಲ್ಲಿ ಆ. 31 ರಂದು ನಡೆಯಿತು.

ಜೆಸಿಐ ವಲಯ15 ವಲಯಾಧ್ಯಕ್ಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಜೆಸಿಐ ವಲಯ15 ರ ಪೂರ್ವ ವಲಯಾಧ್ಯಕ್ಷ ಜೆಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತಾ ಭಾಗವಹಿಸಿ ನೂತನ ಜೇಸಿಗಳನ್ನು ಉದ್ದೇಶಿಸಿ ಜೇಸಿಯಿಂದ ಸಮಾಜದಲ್ಲಿ ನಾವು ಹೇಗೆ ಗುರುತಿಸಿಕೊಳ್ಳಬಹುದು ಹಾಗೂ ನಮ್ಮನ್ನು ಹೇಗೆ ತೊಡಗಿಸಿಕೊಳ್ಳುವ ಮಾತಾನಾಡಿದರು.

ಗೌರವ ಅತಿಥಿಯಾಗಿ ಕುಂದಾಪುರದ ಉದ್ಯಮಿ ಹುಸೈನ್ ಹೈಕಾಡಿ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ವಿಘ್ನೇಶ್ ಪ್ರಸಾದ್ ವಲಯ15 ಪ್ರಾಂತ್ಯ ಡಿ ಯ ವಲಯ ಉಪಾಧ್ಯಕ್ಷ ರಂಜೀತ್ ಎಚ್‌ಡಿ, ಇನ್ನೊರ್ವ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ವಿಟ್ಲ ಉಪಸ್ಥಿತರಿದ್ದರು. ಸಭಾಧ್ಯಕ್ಷರಾಗಿ ಬ್ರಹ್ಮಾವರದ ಯಶವಂತ ಕುಮಾರ್ ಸಭೆ ನಡೆಸಿ ಕೊಟ್ಟರು.

ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಆಶಾಲತಾ ಪ್ರಶಾಂತ್ ಸಭೆಗೆ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ರವಿಚಂದ್ರ ಪಾಟಾಳಿ ವಂದಿಸಿದರು. ಚಿಗುರು ಕಾರ್ಯಕ್ರಮ ನಿರ್ದೇಶಕಿ ಹೇಮಾವತಿ ಕೆ ಇವರು ಕಾರ್ಯಾಗಾರ ಸಂಯೋಜಿಸಿದರು. ಜೇಸಿ ಸುಧೀರ್ ಕೆಎನ್, ಶ್ರೇಯಾ ಶೆಟ್ಟಿ, ಮಮಿತಾ ಸುಧೀರ್, ಭವ್ಯಶ್ರೀ ಕೀರ್ತಿರಾಜ್, ಅನುದೀಪ್ ಜೈನ್, ಪ್ರಮೋದ್ ಕೆ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ಮಧುರ ರಾಘವ್ ಜೇಸಿ ವಾಣಿ ಉದ್ಘೋಷಿಸಿದರು. ರಾಷ್ಟ್ರೀಯ ತರಬೇತುದಾರ ಡಾ. ರಾಘವೇಂದ್ರ ಹೊಳ್ಳ ಹಾಗೂ ವಲಯ ತರಬೇತುದಾರೆ ಅಶ್ವಿನಿ ಐತಾಳ್ ನವ ಜೇಸಿಗಳಿಗೆ ತರಬೇತಿಯನ್ನು ನಡೆಸಿ ಕೊಟ್ಟರು. ಉಡುಪಿ ಮತ್ತು ದಕ್ಷಿಣ ಕನ್ನಡದ ನೂತನ ಜೇಸಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.ಜೆಸಿಐ ಬೆಳ್ತಂಗಡಿಯ ಸದಸ್ಯರು, ಪದಾಧಿಕಾರಿಗಳು, ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

Related posts

ರೆಖ್ಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ವಾರಿಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರ ಪ್ರಕಟಣೆ

Suddi Udaya

ಮೇ 11: ಎಕ್ಸೆಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಪ್ರಾರಂಭ

Suddi Udaya

ನಿವೃತ್ತ ಯೋಧ ಫ್ರಾನ್ಸಿಸ್ ರವರಿಗೆ ಉಜಿರೆ ಕೆಎಸ್ಎಂಸಿಎ ಸಂಘಟನೆ ಮತ್ತು ಊರ ಗಣ್ಯರಿಂದ ಭವ್ಯ ಸ್ವಾಗತ

Suddi Udaya

ವೇಣೂರು ಭಾರತಿ ಶಿಶುಮಂದಿರದಲ್ಲಿ ಭಗವದ್ಗೀತೆಯ ಕಲಿಕಾ ತರಗತಿ ಉದ್ಘಾಟನೆ

Suddi Udaya

ಮಾವಿನಕಟ್ಟೆ ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಡ ಗ್ರಾ.ಪಂ. ಕಾರ್ಯದರ್ಶಿ ಕಿರಣ್‌ರಿಂದ ಮಾದರಿ ಕಾರ್ಯ: ಹಾರೆ ಹಿಡಿದು ಕೊಳವೆ ಬಾವಿಯ ಗುಂಡಿ ಮುಚ್ಚಿದ ಸರಕಾರಿ ನೌಕರ

Suddi Udaya
error: Content is protected !!