23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ದ.ಕ. ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ – ನಿವೃತ್ತ ಶಿಕ್ಷಕರಿಗೆ ಸನ್ಮಾನ

ಬೆಳ್ತಂಗಡಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಬೆಳ್ತಂಗಡಿ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೆಳ್ತಂಗಡಿ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನೋತ್ಸವದ ನೆನಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯು ಸೆ.5ರಂದು ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಜರುಗಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.

ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇ ಗೌಡ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ, ಸಮಾಜವನ್ನು ತಿದ್ದುವ ಮೂಲಕ ಕೊಡುಗೆಯನ್ನು ನೀಡುವವರು ಶಿಕ್ಷಕರು. ಸರಕಾರಿ ಶಾಲಾ ಶಿಕ್ಷಕರು ಎಷ್ಟೇ ನೋವುಗಳು ಇದ್ದರು, ಉತ್ತಮ ಶಿಕ್ಷಣ ನೀಡುವಲ್ಲಿ ವಿಫಲರಾಗಿಲ್ಲ. “ಉತ್ತಮ ಶಿಕ್ಷಕ ಪ್ರಶಸ್ತಿ” ನಿಮ್ಮ ಶ್ರಮ, ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಸಂದ ಗೌರವವಾಗಿದ್ದು ನಮ್ಮ ಶಿಕ್ಷಕರೇ ಶಿಕ್ಷಣದ ಆಸ್ತಿ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬೆಳ್ತಂಗಡಿ ತಾಲೂಕು ಪಂ. ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಭುವನೇಶ್, ಬಸವ ಲಿಂಗಪ್ಪ, ರಾಜೇಂದ್ರ ಕೃಷ್ಣ, ಸುಜಯ, ರಾಜೇಶ್ವರಿ, ಜಯಾನಂದ ಸುವರ್ಣ, ಜ್ಞಾನೇಶ್, ಮನೋರಮ, ಜಯರಾಜ್ ಜೈನ್, ಸದಾನಂದ ಪೂಂಜ, ಮಹಮ್ಮದ್ ರಿಯಾಜ್, ಗುರುಪ್ರಸಾದ್ ಶೆಟ್ಟಿ, ಲಕ್ಷ್ಮೀ ನಾರಾಯಣ, ವಿಮಲ್ ನೆಲ್ಯಾಡಿ, ಪಿಲ್ಲಿ ಪಾಯಸ್, ನಿಂಗರಾಜು, ಬಾಲಕೃಷ್ಣ, ದಿಲೀಪ್ ಕುಮಾರ್, ಮಾರ್ಕ್, ಸುಜಯ, ರವಿರಾಜ್, ರಾಜಶೇಖರ್ ಅಜ್ರಿ, ಕರುಣಾಕರ ಸೋಮಶೇಖರ್ ನಾಯ್ಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷದಲ್ಲಿ ವೃತ್ತಿಯಲ್ಲಿದ್ದುಕೊಂಡು ಅಗಲಿದ ಜಿಲ್ಲೆಯ ಶಿಕ್ಷಕ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಜಶೇಖರ್ ಅಜ್ರಿ ಯವರಿಂದ ಸಮಿತಿಗೆ ದತ್ತಿನಿಧಿ ಸಮರ್ಪಣೆ ನಡೆಯಿತು.

ದ.ಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಶಶಿಧರ್ ಪ್ರಸ್ತಾವಿಸಿ ಸ್ವಾಗತಿಸಿದರು. ಅನುಸೂಯ ಪಾಟಕ್ ಮತ್ತು ಬಳಗದವರು ನಾಡಗೀತೆಯನ್ನು ಹಾಡಿದರು. ದ.ಕ ಜಿಲ್ಲಾ ಶಿಕ್ಷಕರ ದಿನಾಚರಣೆ ಸಮಿತಿ ನೋಡೆಲ್ ಅಧಿಕಾರಿ ಸಂದೇಶ ವಾಚನ ನೆರವೇರಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು.

2025-26ನೇ ಸಾಲಿನ ಕಿರಿಯ, ಹಿರಿಯ, ಪ್ರೌಢಶಾಲಾ ವಿಭಾಗಗಳ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:
ಕಿರಿಯ ಪ್ರಾಥಮಿಕ ವಿಭಾಗ
ಶಾಲಿನಿ ಎಚ್.ಕೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ವೀಣಾ ಮೇರಿ ರೇಗೊ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪ್ಲಬೆಟ್ಟು ಮಂಗಳೂರು , ಉಷಾಲತಾ ಹೆಗ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡ್ಯೋಡಿ ಮಾರ್ಪಾಡಿ ಮೂಡುಬಿದಿರೆ, ಶಾಂತಿ ಲೀನಾ ಮುಖ್ಯ ಶಿಕ್ಷಕಿ ಕಿರಿಯ ಪ್ರಾಥಮಿಕ ಶಾಲೆ ದೇವಸ್ಯ, ಪಡೂರು ಬಂಟ್ವಾಳ, ಜಯಾ ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುರ್ಯ ಬೆಳ್ತಂಗಡಿ, ಜಗನ್ನಾಥ ಕೆ. ಅಮೈ ಕಿರಿಯ ಪ್ರಾಥಮಿಕ ಶಾಲೆ ಅರೆಡಿ ಪುತ್ತೂರು, ಲಲಿತಾ ಕುಮಾರಿ ಎಸ್. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿ, ಸುಳ್ಯ.

ಹಿರಿಯ ಪ್ರಾಥಮಿಕ ವಿಭಾಗ- ಜಯಲಕ್ಷ್ಮಿ ದೈಹಿಕ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ, ಮೀನಕಳಿಯ ಚಂದ್ರಶೇಖರ ಸಿ.ಎಚ್. ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡ ಸೋಮೇಶ್ವರ ಮಂಗಳೂರು ದಕ್ಷಿಣ, ಹರೀಶ ಕೆ.ಎಂ. ಮುಖ್ಯ ಶಿಕ್ಷಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡುಬಿದಿರೆ, ಬಾಬು ನಾಯ್ಕಬಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಕೇವು ಬಂಟ್ವಾಳ, ಆರತಿ ಕುಮಾರಿ ದೈಹಿಕ ಶಿಕ್ಷಣ ಶಿಕ್ಷಕಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ ಬೆಳ್ತಂಗಡಿ, ತಾರಾನಾಥ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಶಾಂತಿಗೋಡು ಪುತ್ತೂರು, ಶ್ರೀಧರ ಗೌಡ ಸ.ಹಿ.ಪ್ರಾ. ಶಾಲೆ ದೇವಚಳ್ಳ ಸುಳ್ಯ.

ಪ್ರೌಢಶಾಲಾ ವಿಭಾಗ-
ವಿಲ್ಮಾ ಪಿ. ಲೋಬೊ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆ ಮಂಗಳೂರು, ದುರ್ಗಾಲತಾ ಸಹ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಪೆರ್ಮನ್ನೂರು ಮಂಗಳೂರು ದಕ್ಷಿಣ, ರತ್ನಾವತಿ ಆಚಾರ್ ಕೆ. ಸಹಶಿಕ್ಷಕಿ ಸರಕಾರಿ ಪ್ರೌಢಶಾಲೆ ಪ್ರಾಂತ್ಯ ಮೂಡುಬಿದಿರೆ, ಆದಂ, ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಸರಪಾಡಿ ಬಂಟ್ವಾಳ, ವಿಜಯ ಕುಮಾರ್ ಎಂ. ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಬೆಳ್ತಂಗಡಿ, ಮೋಹನ ಎ. ಚಿತ್ರಕಲಾ ಶಿಕ್ಷಕ, ಸರಕಾರಿ ಪ್ರೌಢಶಾಲೆ ಎಣ್ಣೂರು ಸುಳ್ಯ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿವೃತ್ತ ಶಿಕ್ಷಕರಿಗೆ ಸನ್ಮಾನ:
ರಾಜಶ್ರೀ ಸಹಶಿಕ್ಷಕರು, ಎಸ್ ಡಿ ಎಂ ಪ್ರೌಢಶಾಲೆ ಬೆಳಾಲು, ಲಿಲ್ಲಿ ಪಾಯ್ಸ್ ಮುಖ್ಯ ಶಿಕ್ಷಕರು ನಾರಾವಿ ಪ್ರೌಢ ಶಾಲೆ ನಾರಾವಿ, ತ್ರಿವೇಣಿ ಬಿ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ, ಅಲೆಕ್ಸಾಂಡರ್ ಓ.ಜೆ ದೈಹಿಕ ಶಿಕ್ಷಣ ಶಿಕ್ಷಕರು ಸಂತ ತೋಮಸ್ ಅ.ಪ್ರೌ. ಶಾಲೆ ಗಂಡಿಬಾಗಿಲು ನೆರಿಯ, ಫೆಲ್ಸಿ ಫಾತಿಮಾ ಮೊರಾಸ್ ಮುಖ್ಯ ಶಿಕ್ಷಕರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ತಣ್ಣೀರುಪಂತ, ಕೃಷ್ಣಪ್ಪ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶಿಪಟ್ನ, ಶಿವಶಂಕರ ಭಟ್ ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಅಂಡಿಂಜೆ, ಸುರೇಶ್ ಆಚಾರ್ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಂಪದಪಲ್ಕೆ, ಮನೋರಮ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಕ್ಕಡ, ಪಂಚಾಕ್ಷರಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು, ರೇವತಿ ಎಚ್ ಡಿ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂಗಾಡಿ, ಜೆಸಿಂತಾ ಬ್ರಾಗ್ ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಉಂಬೆಟ್ಟು, ಸುಂದರಿ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಡೂರು, ಉಷಾ ಕುಮಾರಿ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೂಡುಜಾಲು, ನೇತ್ರಾವತಿ ಜಿ ಸಹಶಿಕ್ಷಕರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ತುರ್ಕಳಿಕೆ, ರೆನಿಲ್ಲಾ ಜೋಯ್ಸ್ ಮಥಾಯಸ್ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಂಜ, ಶಂಕರ್ ತಾಮಟ್ಕರ್ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಬೈಲು ಪರಾರಿ, ವಿದ್ಯಾಕುಮಾರಿ ಪಿ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಂಡಿಬಾಗಿಲು, ಸರೋಜಾ ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಡಗಕಾರಂದೂರು
ಗ್ರೆಟ್ಟ ಮರಿಯ ಡಿಮೆಲ್ಲೋ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಂಜ, ನಿರ್ಮಲ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಂಪದಪಲ್ಕೆ, ಮೋಂತಿ ಡಿಸೋಜ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಉಣ್ಣಾಲು, ರೆಜಿನಾ ಡಿಸಿಲ್ವಾ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯರು ದೇವಸ್ಥಾನ, ಶಾಲಿನಿ ಪಿ. ಕೆ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ, ಸರೋಜ ಯು ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಇಳಂತಿಲ,
ಸಿದ್ದಪ್ಪ ಮೆಟಗಾರ ಸಹಶಿಕ್ಷಕರು ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ, ಸೀತಾರಾಮ ಗೌಡ ಕೆ ದೈಹಿಕ ಶಿಕ್ಷಣ ಶಿಕ್ಷಕರು ಗೋಪಾಲಕೃಷ್ಣ ಅ. ಹಿ. ಪ್ರಾ. ಶಾಲೆ ಅರಸಿನಮಕ್ಕಿ, ನಿಂಗಪ್ಪ ಸಹ ಶಿಕ್ಷಕರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಾರು, ಪ್ರವೀಣ್ ಕುಮಾ‌ರ್ ಪ್ರಥಮ ದರ್ಜೆ ಸಹಾಯಕರು ಕೆ. ಪಿ. ಎಸ್. ಪುಂಜಾಲಕಟ್ಟೆ ಇವರಗೆ ಸನ್ಮಾನಿಸಲಾಯಿತು.

Related posts

ಉಜಿರೆ : ಅನುಗ್ರಹ ಶಾಲೆಯಲ್ಲಿ ಹುತಾತ್ಮರ ದಿನಾಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ವನಮಹೋತ್ಸವ

Suddi Udaya

ಹೊಚ್ಚ ಹೊಸ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ 10% ಡಿಸ್ಕೌಂಟ್ ಸೇಲ್

Suddi Udaya

ಬೆಳ್ತಂಗಡಿ: ಆದಿನಾಥ ಬಜಾಜ್ ನಲ್ಲಿ ಆಯುಧ ಪೂಜೆ

Suddi Udaya

ಕಾಶಿಪಟ್ಣ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Suddi Udaya

ಅರಸಿನಮಕ್ಕಿ: ಮಕ್ಕಳ ಸಂಸ್ಕಾರ ಶಿಬಿರದ ಮಾಹಿತಿ ಕರಪತ್ರ ಬಿಡುಗಡೆ

Suddi Udaya
error: Content is protected !!