September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಾತಿ ಗಣತಿ ಸಮೀಕ್ಷೆಯಲ್ಲಿ ಗೌಡ ಸಮಾಜ ಬಾಂಧವರು ಜಾತಿ ಕಾಲಂ ನಲ್ಲಿ ಒಕ್ಕಲಿಗ , ಉಪಜಾತಿಯ ಕಾಲಂ ನಲ್ಲಿ ಗೌಡ ಎಂದು ನಮೂದಿಸುವಂತೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಹೇಳಿಕೆ

ಬೆಳ್ತಂಗಡಿ: ಕರ್ನಾಟಕ ಸರಕಾರವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ನಿರ್ಧರಿಸಿದ್ದು ಇದೇ ಸೆ. 22ರಂದು ಸಮೀಕ್ಷೆ ಆರಂಭಗೊಳ್ಳುವುದು. ಮುಂದಿನ 15 ದಿನಗಳ ತನಕ ಸರಕಾರ ನಿಗದಿ ಪಡಿಸಿದ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡುವ ಕಾರ್ಯಕ್ರಮದ ಬಗ್ಗೆ ಈಗಾಗಲೇ ನಿರ್ಧರಿಸಿದ್ದು, ಸಮಾಜ ಬಾಂಧವರಾದ ತಮ್ಮ ಮನೆಗೆ ಸಮೀಕ್ಷೆಗೆ ಬಂದಾಗ ಅಂದಾಜು ಪ್ರಕಾರ ಸುಮಾರು 55 ವೈಯಕ್ತಿಕ ವಿವರಗಳನ್ನು ನಿಮ್ಮಿಂದ ಪಡೆಯಲಿದ್ದು ಮುಖ್ಯವಾಗಿ ಸಮಾಜ ಬಾಂಧವರಾದ ತಾವುಗಳು ಜಾತಿಯ ಕಾಲಂ ನಲ್ಲಿ ಒಕ್ಕಲಿಗ ಎಂದೂ, ಉಪಜಾತಿಯ ಕಾಲಂ ನಲ್ಲಿ ಗೌಡ ಎಂದೂ ಹಾಗೂ ಮಾತೃ ಭಾಷೆಯ ಕಾಲಂ ನಲ್ಲಿ ತುಳು ಭಾಷೆ ಮಾತನಾಡುವವರು ತುಳು ಎಂದೂ, ಅರೆ ಭಾಷೆ ಮಾತಾಡುವವರು ಅರೆ ಭಾಷೆ ಎಂದೂ, ಹಾಗೂ ಕನ್ನಡ ಮಾತನಾಡುವವರು ಕನ್ನಡ ಎಂದು ನಮೂದಿಸಬೇಕೆಂದು ತಾಲೂಕು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ರವರು ತಿಳಿಸಿದ್ದಾರೆ.

ಅವರು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸೆ. 17ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
2025ರ ಮಾರ್ಚ್/ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚಿನ ಮತ್ತು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಬೆಳ್ತಂಗಡಿ ತಾಲೂಕಿನ ಗೌಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅ.12 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳು ವಾಣಿ ಕಾಲೇಜಿನ ಕಛೇರಿಯಿಂದ ಅರ್ಜಿಗಳನ್ನು ಪಡೆದುಕೊಂಡು, ಗ್ರಾಮ ಸಮಿತಿ ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರಿಂದ ದೃಢೀಕರಿಸಿ ದಾಖಲೆಗಳೊಂದಿಗೆ ಅ.04 ರರೊಳಗೆ ವಾಣಿ ಪದವಿ ಪೂರ್ವ ಕಾಲೇಜಿನ ಕಛೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ.

ಅಲ್ಲದೆ ಸಾಂಸ್ಕೃತಿಕ/ಆಟೋಟ ಸ್ಪರ್ಧೆಗಳಲ್ಲಿ (ಸರ್ಕಾರಿ ಇಲಾಖೆಗಳ ವತಿಯಿಂದ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರು) ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅ.06 ರ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪಗೌಡ, ಕೋಶಾಧಿಕಾರಿ ಯುವರಾಜ್ ಅನಾರು, ನಿರ್ದೇಶಕರಾದ ವಸಂತ ಗೌಡ, ದಿನೇಶ್ ಗೌಡ, ಡಿ ಎಂ ಗೌಡ ಉಪಸ್ಥಿತರಿದ್ದರು.

ಕಾರ್ಯದರ್ಶಿ ಗಣೇಶ್ ಗೌಡ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆಎಂ ಧನ್ಯವಾದವಿತ್ತರು.

Related posts

ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 30 ಬಗೆಯ ಉಟೋಪಚಾರ

Suddi Udaya

ಕೊಟ್ಟಿಗೆಹಾರ: ದೇವರ ಮನೆ ಪ್ರವಾಸಕ್ಕೆ ಹೋದ ಬೆಳ್ತಂಗಡಿಯ ಯುವಕ ನಾಪತ್ತೆ ಪ್ರಕರಣ: ಕೊಯ್ಯೂರು ಪರಿಸರದಲ್ಲಿ ಪತ್ತೆಯಾದ ಯುವಕ ದೀಕ್ಷಿತ್ ಪೂಜಾರಿ

Suddi Udaya

ಬೆಳ್ತಂಗಡಿ ಕ.ಸಾ.ಪ. ಕ್ಕೆ ಸಂಘಟನ ಕಾರ್ಯದರ್ಶಿಗಳ ನೇಮಕ

Suddi Udaya

ಹ್ಯಾಂಡ್‌ಬಾಲ್ ಪಂದ್ಯಾಟ : ಸಂತ ತೆರೇಸಾ ಪ್ರೌಢಶಾಲೆಯ ನಾಲ್ಕು ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಅಂತರಾಷ್ಟ್ರೀಯ ಯುವ ಶೃಂಗಸಭೆಯಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನನ್ನು ಪ್ರತಿನಿಧಿಸಿದ ಡಾ. ವಾಜಿದ ಬಾನು

Suddi Udaya

ನಾಳೆ(ಅ.31) ಬೆಳ್ತಂಗಡಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ: ಗೋರಕ್ಷಕ ಪುನೀತ್ ಕೆರೆಹಳ್ಳಿ ಭಾಗಿ

Suddi Udaya
error: Content is protected !!