July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಮೆಹಂದಿ ಡಿಸೈನ್ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಮೆಹಂದಿ ಡಿಸೈನ್ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ರಮೇಶ್ ಇವರು ಮಾತನಾಡಿ ಮೆಹಂದಿ ಡಿಸೈನ್ನ್ನು ನಿರಂತರವಾಗಿ ಕಲಿಯಿವುದರಿಂದ ಹೆಚ್ಚು ಕೌಶಲ್ಯದ ಹೆಚ್ಚು ಆದಾಯ ಗಳಿಕೆ ಮಾಡಬಹುದು. ಸಂಸ್ಥೆಯು ಉಚಿತವಾಗಿ ನೀಡುವ ಉದ್ದೇಶವೇನಂದರೆ ಮಹಿಳೆಯರು ಇತರರಿಗೆ ಅವಲಂಬಿಸದೆ ಸ್ವಂತ ಉದ್ದಿಮೆ ಮಾಡಬೇಕು ಎನ್ನುವುದಾಗಿದೆ. ಇದರಿಂದ ಮಹಿಳೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು. ಸಮಾಜದಲ್ಲಿ ಗೌರವ ಹಾಗೂ ಸ್ವಾವಲಂಬಿ ಬದುಕನ್ನು ಕಾಣಬಹುದು. ಈ ತರಬೇತಿಯು ಯಾವುದೇ ಬಂಡವಾಳ ಇಲ್ಲದೆ ಸಂಪಾದನೆ ಮಾಡುವ ಸ್ವಉದ್ಯೋಗವಾಗಿದೆ ಎಂದರು.

ಇವರು ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.
ಒಟ್ಟು 27 ಮಂದಿ ಯೋಜನೆಯ ಪಾಲುದಾರ ಬಂಧುಗಳು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕು. ಹರ್ಷಿತಾ ಇವರು ತರಗತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕರಾದ ಜಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.

Related posts

ಉಜಿರೆಯಲ್ಲಿ ಸ್ಕಿನ್ ಮತ್ತು ಹೇರ್ ಗೆ ಸಂಬಂಧಿಸಿದ ಕಾಸ್ಮೆಟಾಲಜಿ ಮತ್ತು ಟ್ರೈಕಾಲಜಿ ಕೇಂದ್ರದ ಉದ್ಘಾಟನೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವಿಧಾನಸಭಾ ಕ್ಷೇತ್ರ ಸಮಿತಿ ನೂತನ ಅಧ್ಯಕ್ಷೆಯಾಗಿ ಶಮಾ ಆಯ್ಕೆ

Suddi Udaya

ಉರುವಾಲು: ಕುಪ್ಪೆಟ್ಟಿ ರಸ್ತೆಯಲ್ಲಿ ಬೃಹತ್ ಹೊಂಡ: ಸ್ಥಳೀಯರಿಂದ ರಸ್ತೆಯ ಮಧ್ಯೆ ಕೆಂಪು ವಸ್ತ್ರವಿಟ್ಟು ಎಚ್ಚರಿಕೆಯ ಸೂಚನೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

Suddi Udaya

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!