26 C
ಪುತ್ತೂರು, ಬೆಳ್ತಂಗಡಿ
October 21, 2026
ಸಾಧಕರು

ಹೆಮ್ಮೆಯ ಕನ್ನಡಿಗ ‘ರಾಷ್ಟ್ರಪ್ರಶಸ್ತಿ’ಗೆ ಲ| ಡಾ.ಗೋಪಾಲಕೃಷ್ಣ ಕಾಂಚೋಡು ಆಯ್ಕೆ

‘ಬೆಳ್ತಂಗಡಿ: ಪ್ರಗತಿಪರ ಕೃಷಿಕ ಹಾಗೂ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಲ| ಡಾ.ಗೋಪಾಲಕೃಷ್ಣ ಕಾಂಚೋಡು ಅವರು ಬೆಂಗಳೂರಿನ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಕರ್ನಾಟಕ ರಾಜ್ಯ ನಾಮಕರಣ 52ನೇ ವರ್ಷದ ಸುವರ್ಣ ವರ್ಷಾಚರಣೆ ಅಂಗವಾಗಿ, 71ನೇ ಕರ್ನಾಟಕ ರಾಜ್ಯೋತ್ಸವದ ಶುಭಸಂದರ್ಭದಲ್ಲಿ ನೀಡುವ ‘ಹೆಮ್ಮೆಯ ಕನ್ನಡಿಗ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನ.24ರಂದು ಬೆಂಗಳೂರಿನ ರಂಗಮಂದಿರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕನ್ನಡ ರಾಜೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಚೋಡು ಅವರಿಗೆ ಈ ಪ್ರಶಸ್ತಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಡಾ. ಗೋಪಾಲಕೃಷ್ಣ ಕಾಂಚೋಡು ಅವರು ಪ್ರಗತಿಪರ ಸಾವಯವ ಕೃಷಿಕರಾಗಿದ್ದು, ಎ.ಕೆ.ಎಂ.ಎಸ್.ಎಸ್‌ನ ಜಿಲ್ಲಾ ಗೌರವಾಧ್ಯಕ್ಷರಾಗಿ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇವರು ‘ಜೈಜವಾನ್ ಜೈ ಕಿಸಾನ್’ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ‘ಕರಾವಳಿ ರತ್ನ’ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದಾರೆ.

Related posts

ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಸರಸ್ವತಿ ಸಂಗೀತ ಶಾಲೆಗೆ ಶೇಕಡ 100 ಫಲಿತಾಂಶ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯರಿಗೆ ಸನ್ಮಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ, ಜಯರಾಮ ನೆಲ್ಲಿತ್ತಾಯರಿಗೆ “ಸಮಾಜ ಭೂಷಣ”ಪ್ರಶಸ್ತಿ

Suddi Udaya

ಸುಳ್ಯ ಕೆರ್ಪಳ ಪಯಸ್ಸಿನಿ ಯುವಕ ಮಂಡಲ ವತಿಯಿಂದ ಲಕ್ಷ್ಮಿನಾರಾಯಣರವರಿಗೆ ಪಯಸ್ಸಿನಿ ಗೌರವ

Suddi Udaya
error: Content is protected !!