23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ ಎಸ್‌ಯುವಿ ವಿಭಾಗದ ವಿಕ್ಟೋರಿಸ್ ಕಾರು ಬಿಡುಗಡೆ

ನಾರಾವಿ: ದೇಶದ ಅತಿದೊಡ್ಡ ಪ್ರಯಾಣಿಕ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಹೊಸ ಎಂಟ್ರಿ-ಎಸ್‌ಯುವಿ ವಿಭಾಗದ ಕಾರು ವಿಕ್ಟೋರಿಸ್ ಅನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿಯ ಈ ಹೊಸ ಕಾರು ಎಲ್ಲಾ ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಅನಾವರಣಗೊಂಡಿದ್ದು ,ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ ಹೊಸ ಕಾರನ್ನು ಮಾರುಕಟ್ಟೆಗೆ ನ 3 ರಂದು ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ನಾರಾವಿ ಗ್ರಾ‌ಪಂ ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಉದ್ಯಮಿ ರೋಶನ್ ಹೆಗ್ಡೆ,
ನಾರಾವಿ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು,ಕಾರ್ಕಳ ಗುತ್ತಿಗೆದಾರರಾದ ಸದಾನಂದ ಮೂಲ್ಯ, ನಾರಾವಿ ಉದ್ಯಮಿ ಮಹಾವೀರ ಜೈನ್,ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ವಿಶ್ವೇಶ್ವರ, ಉದ್ಯಮಿಗಳಾದ ರವಿರಾಜ್ ಜೈನ್ ನಾರಾವಿ, ಶಿರ್ತಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಶೆಟ್ಟಿ ಉಪಸ್ಥಿತರಿದ್ದು ನೂತನ ಕಾರು ಗ್ರಾಹಕರಿಗೆ ಹಸ್ತಾಂತರಿಸಿ ಶುಭ ಕೋರಿದರು.

ನೂತನ ವಿಕ್ಟೋರಿಸ್ ಕಾರಿನ ಮೊದಲ ಗ್ರಾಹಕರಾದ ಮೈಸೂರು ಎಸ್‌.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ
ಸಂತೋಷ್ ಜೈನ್,ಬ್ರಿಝಾ ಕಾರಿನ ಗ್ರಾಹಕರಾದ ನಾರಾಯಣ್,ಎಸ್ಪ್ರೆಸೋ ಕಾರಿನ ಗ್ರಾಹಕರಾದ ಸುರೇಂದ್ರ ನಾರಾವಿ,ಇಕೋ ಕಾರಿನ ಗ್ರಾಹಕರಾದ ಗ್ರೇಸಿ ಮೊಂತೋರೋ ಲೋಬೋ ಇಂಡಸ್ಟ್ರೀಸ್ ಪಣೆಜಾಲು ಇದ್ದರು.

ಗ್ರಾಮೀಣ ಮಾರಾಟ ವಿಭಾಗದ ಮ್ಯಾನೇಜರ್ ಸುಜಿತ್ ಕುಮಾರ್, ನಾರಾವಿ ಸರ್ವೀಸ್ ಮ್ಯಾನೇಜರ್ ಗಣೇಶ್ ಕುಲಾಲ್, ಸೀನಿಯರ್ ಟೀಮ್ ಮ್ಯಾನೇಜರ್ ಚರಣ್ ಕುಮಾರ್ ಹಾಗೂ ನಾರಾವಿ ಮಾಂಡೋವಿ ಮೋಟಾರ್ಸ್ ನ ಸುಹಾಸ್ ಜೈನ್, ಸುಚಿತ್ರಾ ಎಸ್, ನವೀನ್ ಕುಮಾರ್, ಚಿದಾನಂದ ಪೂಜಾರಿ, ಲತೇಶ್, ಸಂತೋಷ್ ಕುಮಾರ್ ,ಜಿನೇಂದ್ರ ಜೈನ್, ಮನೋಹರ್ ಉಪಸ್ಥಿತರಿದ್ದರು.

ಮಾರುತಿ ಸುಝುಕಿ ವಿಕ್ಟೋರಿಸ್ ವಿಶೇಷತೆಗಳು:

ಇದು ನವೀನತೆ , ಐಶ್ವರ್ಯ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ.ಇನ್-ಕಾರ್ ಅನುಭವ, ಇನ್‌ಫಿನಿಟಿ ಪ್ರೀಮಿಯಂ 8 ಸ್ಪೀಕರ್ ಸೌಂಡ್ ಸಿಸ್ಟಮ್, ಸೆಂಟರ್ ಸ್ಪೀಕರ್‌ ಸಹಿತ ಡಾಲ್ಬಿ ಅಟ್ಮಾಸ್ ಸೌಂಡ್ ಎಕ್ಸ್‌ಪೀರಿಯನ್ಸ್ ಹೊಂದಿದೆ.

10.25 ಇಂಚಿನ HD ಸ್ಮಾರ್ಟ್ ಪ್ಲೇ ಪ್ರೋ+ ಟಚ್ ಸ್ಕ್ರೀನ್,ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್,64 ಕಲರ್ ಆಂಬಿಯೆಂಟ್ ಲೈಟ್ ಸಿಸ್ಟಮ್,ಇನ್‌ಬಿಲ್ಟ್ 35+ ಕನೆಕ್ಟೆಡ್ ಅಪ್ಲಿಕೇಶನ್‌ಗಳು,7 ಇಂಚಿನ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ — ಆಧುನಿಕ ಮತ್ತು ಇಂಟೆಲಿಜೆಂಟ್ ಕಾಕ್ಪಿಟ್ ಇದೆ.

ಸೌಲಭ್ಯ ಮತ್ತು ಆರಾಮ,ಪವರ್ ಟೆಲ್‌ಗೇಟ್ ವಿತ್ ಜೆಸ್ಚರ್ ಕಂಟ್ರೋಲ್, ವೆಂಟಿಲೇಟೆಡ್ ಸೀಟುಗಳು, 8-ವೇ ಪವರ್ ಡ್ರೈವರ್ ಸೀಟ್,ಉನ್ನತ ಮಟ್ಟದ ಡ್ರೈವಿಂಗ್ ಆರಾಮವಾಗಿದೆ.

ಭದ್ರತೆ, ಗ್ಲೋಬಲ್ ಎನ್‌ಕ್ಯಾಪ್ ಮತ್ತು ಭಾರತ ಎನ್‌ಕ್ಯಾಪ್ 5 ಸ್ಟಾರ್ ರೇಟಿಂಗ್ ಮಟ್ಟದ ಸುರಕ್ಷತೆ,ಲೆವೆಲ್ 2 ADAS‌ನ ಅತ್ಯಾಧುನಿಕ ವೈಶಿಷ್ಟ್ಯಗಳು,ಅಡಾಪ್ಟಿವ್ ಕ್ರೂಸ್ ಕಂಟ್ರೋಲ್,ಲೇನ್ ಕೀಪ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್,ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 6 ಏರ್‌ಬ್ಯಾಗ್‌ಗಳು, ಎಲ್ಲಾ ಚಕ್ರಗಳಿಗೂ ಡಿಸ್ಕ್ ಬ್ರೇಕ್‌ಗಳು ಇದೆ.

ವಿನ್ಯಾಸ,ಮುಂಭಾಗದಲ್ಲಿ ಬೋಲ್ಡ್ ಕಟ್ LED DRLs,ಆಕರ್ಷಕ LED ಟೇಲ್ ಲ್ಯಾಂಪ್‌ಗಳು,ಸ್ಟೈಲಿಶ್ 3 ಲೇಯರ್ ಸ್ಟಿಚ್ಡ್ ಡ್ಯಾಶ್‌ ಬೋರ್ಡ್, ವಿಶಿಷ್ಟ ಮತ್ತು ಶ್ರೇಷ್ಠ ಲುಕ್, ಪವರ್‌ಟ್ರೇನ್,ಹೊಸ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ,ಆಲ್ ಗ್ರಿಪ್ ಸೆಲೆಕ್ಟ್ ಆಯ್ಕೆ,
ಹೊಸ S-CNG ಆಯ್ಕೆಯೂ ಲಭ್ಯ, ಅತ್ಯುತ್ತಮ ಮೈಲೇಜ್ ಮತ್ತು ದಕ್ಷತೆ, ವಿಕ್ಟೋರಿಸ್, ವೇರಿಯಂಟ್ಸ್: 3 ವೇರಿಯಂಟ್‌ಗಳು, ಬಣ್ಣಗಳು: 6 ಕಲರ್‌ಗಳು, ರೂ10,49,000ರಿಂದ ಪ್ರಾರಂಭವಾಗಿದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ತರಬೇತಿ ಕಾರ್ಯಾಗಾರ

Suddi Udaya

ಓಡಿಲ್ನಾಳ : ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ಧ್ವಜಾರೋಹಣ, ಪ್ರಥಮ ಜಾತ್ರೆ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಧರ್ಮಾಧ್ಯಕ್ಷರ ರಜತ ಸಂಭ್ರಮದ ಭವ್ಯಾಚರಣೆ

Suddi Udaya

ಪದ್ಮುಂಜ ಪ್ರಾ.ಕೃ.ಪ.ಸ. ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದ ರಘುಪತಿ. ಕೆ ಅನಾಬೆ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮಡಂತ್ಯರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ

Suddi Udaya

ಕೊಕ್ಕಡ ಸರಕಾರಿ ಪ್ರೌಢಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘ ರಚನೆ

Suddi Udaya
error: Content is protected !!