ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಅವರಿಗೆ ಭವ್ಯ ಸ್ವಾಗತ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬವರ್ಗದವರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ಪಾದಯಾತ್ರೆ ಸುಗಮವಾಗಿ ಅನನ್ಯ ಅನುಭವ ನೀಡಿದೆ ಎಂದು ಅಂಕಣಕಾರ ಅಹಮ್ಮದ್ ಉಲ್ಲಾ ಹೇಳಿದರು.

ಅವರು ನ.18 ರಂದು ಪಾದಯಾತ್ರೆಯಲ್ಲಿ ಧರ್ಮಸ್ಥಳ ತಲುಪಿದಾಗ  ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ಕರೆತರಲಾಯಿತು. ಬಳಿಕ ಅವರು ಹೆಗ್ಗಡೆಯವರೊಂದಿಗೆ ಪಾದಯಾತ್ರೆ ಬಗ್ಗೆ ತನ್ನ ಅನುಭವ ಹಂಚಿಕೊಂಡರು.


ದಾರಿಯುದ್ಧಕ್ಕೂ ಹೆಗ್ಗಡೆಯವರು ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು. ಇಡೀ ರಾಜ್ಯದ ಜನತೆ ಧರ್ಮಸ್ಥಳದ ಅಭಿಮಾನಿಗಳು ಹಾಗೂ ಭಕ್ತರು. ನಾವೆಲ್ಲರೂ ನಿಮ್ಮ ಪವಿತ್ರ ಕ್ಷೇತ್ರದ ಫಲಾನುಭವಿಗಳು ಎಂದು ಸಂತಸ ವ್ಯಕ್ತಪಡಿಸಿದರು.

Related posts

ತೀರಾ ಹದಗೆಟ್ಟ ಪಡಂಗಡಿ ರಸ್ತೆ: ದುರಸ್ತಿಗೊಳಿಸುವಂತೆ ಪಡಂಗಡಿ ಗ್ರಾಮಸ್ಥರಿಂದ ಮನವಿ

Suddi Udaya

ಶಿಶಿಲ ಗ್ರಾ.ಪಂ ನಲ್ಲಿ ಕಸ್ತೂರಿರಂಗನ್ ವಿರೋಧಿಸುವ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಇಂದಬೆಟ್ಟು : ಶ್ರೀ ಧರ್ಮಸ್ಥಳ ಶೌರ್ಯ ಘಟಕ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳ ನಾಟಿ ಕಾರ್ಯಕ್ರಮ

Suddi Udaya

ನಿಡ್ಲೆ: ರಾಧಾಕೃಷ್ಣ ಆಚಾರ್ಯ ನಿಧನ

Suddi Udaya

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ “ಮುಸ್ಕಾನ್ ಕೌಸರ್” ರಿಗೆ ಬ್ಯಾರೀಸ್‌ ವೆಲ್‌ಫೇ‌ರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya

ಬೆಳ್ತಂಗಡಿಗೆ ಎರಡು ನ್ಯಾಯಾಧೀಶರನ್ನು ನೇಮಕಗೊಳಿಸಿ ಹೈಕೋರ್ಟ್ ಆದೇಶ

Suddi Udaya
error: Content is protected !!