September 6, 2026
ತಾಲೂಕು ಸುದ್ದಿವರದಿ

ಜಿಲ್ಲಾ ಮಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿಗೆ ಹಲವಾರು ಪ್ರಶಸ್ತಿ

ಉಜಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ದ ಕ ಜಿಲ್ಲೆ ಮಂಗಳೂರು ಹಾಗೂ ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು ಇದರ ಸಹಭಾಗಿತ್ವದಲ್ಲಿ ನ.20 ರಂದು ಪುತ್ತೂರಿನ ಸೈಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ.

ದ್ವಿತೀಯ ಪಿಯುಸಿ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಪ್ರೀತಮ್ ಶೆಟ್ಟಿಗಾರ್ ಪೈಂಟಿಂಗ್ ನಲ್ಲಿ ಪ್ರಥಮ ಸ್ಥಾನ, ದ್ವಿತೀಯ ವಾಣಿಜ್ಯ ವಿಭಾಗದ ಹಂಸಿನಿ ಭಿಡೆ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ, ದ್ವಿತೀಯ ಕಲಾ ವಿಭಾಗದ ಅನಘಾ ಜನಪದ ನೃತ್ಯದಲ್ಲಿ ತೃತೀಯ ಸ್ಥಾನ ಹಾಗೂ ದ್ವಿತೀಯ ಕಲಾ ವಿಭಾಗದ ಶ್ರೀಪೂರ್ಣ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಥಮ ಪಿಯುಸಿ ವಿಭಾಗದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಸಾತ್ವಿಕ್ ಭಟ್ ಪೈಂಟಿಂಗ್ ನಲ್ಲಿ ಪ್ರಥಮ ಸ್ಥಾನ, ಪ್ರಥಮ ವಿಜ್ಞಾನ ವಿಭಾಗದ ಸಾಗರೀಕಾ ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರಥಮ ಕಲಾ ವಿಭಾಗದ ಮನೋಜ್ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಉಡುಪಿಯಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ.

Related posts

ಬೆಳ್ತಂಗಡಿ: ಉಪನ್ಯಾಸಕ ಪುನೀತ್ ಕುಮಾರ್ ಬಯಲು ಅವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಪುತ್ತೂರು ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತ್ಯು

Suddi Udaya

ಕೊಕ್ಕಡ: ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ ಪ್ರಯುಕ್ತ ಗಣಹೋಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಡಿರ ಬನದಲ್ಲಿ ನಾಲ್ಕು ನಾಗನ ಕಲ್ಲುಗಳು ಹಾಗೂ ಎರಡು ಮಣ್ಣಿನ ಮಡಕೆ, ಒಂದು ತಿಬಿಲೆ ಪತ್ತೆ

Suddi Udaya

ಕು| ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಮಚ್ಚಿನ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಸಿಎಂ ಸಿದ್ದರಾಮಯ್ಯ ರಿಗೆ ಮನವಿ

Suddi Udaya

ಪ್ರೇಕ್ಷಕರ ಮನಸ್ಸಲ್ಲಿ ಸಹಿ ಹಾಕಲು ರೆಡಿಯಾದ ದಸ್ಕತ್

Suddi Udaya
error: Content is protected !!