29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಡುಪಿಯಲ್ಲಿ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಬೆಳ್ತಂಗಡಿ ತಾಲ್ಲೂಕಿನ ಭಜನಾಪಟುಗಳು

ಉಜಿರೆ: ಶ್ರದ್ಧಾ-ಭಕ್ತಿಯಿಂದ ಮಾಡುವ ಭಜನೆಯಿಂದ ಸುಲಭದಲ್ಲಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಕಾರ್ಯದರ್ಶಿ ಎ.ವಿ.ಶೆಟ್ಟಿ ಹೇಳಿದರು.

ಅವರು ನ.30ರಂದು ಗುರುವಾಯನಕೆರೆಯಲ್ಲಿ ಉಡುಪಿಗೆ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಭಜನಾ ಪರಿಷತ್ ನೇತೃತ್ವದಲ್ಲಿ ಪ್ರಯಾಣಿಸುವ ಎರಡೂವರೆ ಸಾವಿರಕ್ಕೂ ಮಿಕ್ಕಿದ ಭಜನಾಪಟುಗಳಿಗೆ ಶುಭ ಹಾರೈಸಿ ಮಾತನಾಡಿದರು.


ಕಳೆದ 27 ವರ್ಷಗಳಿಂದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ನಡೆಸುತ್ತಿರುವ ಭಜನಾ ಕಮ್ಮಟದಿಂದಾಗಿ ಪ್ರತಿಮನೆಗಳಲ್ಲಿ ನಿತ್ಯವೂ ಭಜನೆ ಮಾಡುವ ಸಂಸ್ಕಾರ ಬೆಳೆದುಬಂದಿದೆ. ತನ್ಮೂಲಕ ಪ್ರತಿಮನೆಗಳಲ್ಲಿಯೂ, ಪ್ರತಿಯೊಬ್ಬರ ಮನದಲ್ಲೂ ಶಾಂತಿ, ನೆಮ್ಮದಿ ನೆಲೆಸಿದೆ. ಎಳೆಯ ಮಕ್ಕಳು ಕೂಡಾ ಭಜನೆಯನ್ನು ರಾಗ, ತಾಳ, ಲಯಬದ್ಧವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಹೇಳಿ ಶುಭ ಹಾರೈಸಿ ಭಜನಾ ಸೇವೆಯಿಂದ ಎಲ್ಲರಿಗೂ ಶ್ರೀ ಕೃಷ್ಣನ ಅನುಗ್ರಹ ದೊರಕಲೆಂದು ಆಶಿಸಿದರು.

ಧರ್ಮಸ್ಥಳದಲ್ಲಿ ಅನ್ನಪೂರ್ಣ ಛತ್ರದ ಮೇಲ್ವಿಚಾರಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಭಜನಾ ಕಮ್ಮಟದಿಂದಾಗಿ ಪ್ರತಿ ಊರಿನಲ್ಲಿಯೂ ಭಜನಾ ಮಂಡಳಿ ಮೂಲಕ ಉತ್ತಮ ನಾಯಕರು ಮೂಡಿ ಬಂದಿದ್ದು ಊರಿನ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.


ನವಶಕ್ತಿಯ ಉದ್ಯಮಿ ರಾಜೇಶ್ ಶೆಟ್ಟಿ ಶುಭಾಶಂಸನೆ ಮಾಡಿದರು.
ಎಸ್.ಡಿ.ಎಂ. ಭಜನಾ ಪರಿಷತ್‌ನ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಮನೋಹರ ಬಳಂಜ, ಭಜನಾ ಪರಿಷತ್ ವಲಯಾಧ್ಯಕ್ಷ ಜಗದೀಶ್ ಮೈರ, ಜಯರಾಜ್ ನಡಕ್ಕರ, ಸಂದೇಶ್ ಮದ್ದಡ್ಕ, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಶೋಕ್ ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Related posts

ಮಡಂತ್ಯಾರು: ಬಸವನಗುಡಿ ಒಕ್ಕೂಟದ ವತಿಯಿಂದ ಗ್ರಾಮ ಸುಭಿಕ್ಷೆ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಮುಂಡೂರು ಪ್ರಾಯೋಜಕತ್ವದಲ್ಲಿ ಮೈರೊಳ್ತಡ್ಕ ವಿವೇಕಾನಂದನಗರದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿಜ್ -ವರ್ಲ್ಡ್ 2025

Suddi Udaya

ತೆಕ್ಕಾರು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶಿಲಾನ್ಯಾಸ

Suddi Udaya

ಕೊಕ್ಕಡ: ಪೂವಾಜೆ ಇಬರ ರಸ್ತೆಯ ಹತ್ತಿರ ಸರ್ಕಾರಿ ಗೇರು ಪ್ಲಾಂಟೇಶನ್ ಗೆ ತಗುಲಿದ ಬೆಂಕಿ

Suddi Udaya
error: Content is protected !!