September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಜಿನ ಭಜನಾ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಉಜಿರೆ: ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ವೀರಾಂಗಣ ಡಿ. ಅನಿತಾ ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಜಗೋಳಿಯ ಸುಮ್ಮಗುತ್ತುವಿನಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8ರ 9ನೇ ಆವೃತ್ತಿಯ ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಉಜಿರೆಯ ಹರ್ಷದಾ ತಂಡ ನಾಲ್ಕನೇ ಸ್ಥಾನ ಹಾಗೂ ಬ್ರಾಹ್ಮರಿ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಈ ತಂಡದಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಅನಿಕ ಜೈನ್, ಶುಕ್ತಿ ಜೈನ್, ಅದ್ವಿತಿ ಜೈನ್ ಹಾಗೂ ದೀಪ್ತಾ ಜೈನ್ ಭಾಗವಹಿಸಿ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಉಜಿರೆಯ ತೃಪ್ತ ಕುಮಾರ್ ಜೈನ್ ಸಂಯೋಜಿಸಿದ ವಿಜೇತ ಜಿನಭಜನಾ ತಂಡಗಳಿಗೆ ಸೋನಿಯಾ ಯಶೋವರ್ಮ ರವರು ಮಾರ್ಗದರ್ಶನ ನೀಡಿ, ಅಭಿನಂದಿಸಿರುತ್ತಾರೆ.

Related posts

ಬೆಳ್ತಂಗಡಿಯಲ್ಲಿ ಮೊಬೈಲ್ ಅಸೋಸಿಯೇಶನ್ ನಿಂದ ಲಕ್ಕಿ ಕೂಪನ್ ಡ್ರಾ

Suddi Udaya

ಬೆಳ್ತಂಗಡಿಯಲ್ಲಿ ಪ್ರಶ್ವಿನ್ ಪ್ರಿಂಟರ್ಸ್ ಶುಭಾರಂಭ

Suddi Udaya

ಎಸ್.ಡಿ.ಎಂ ಕಾಲೇಜು: ವಿಟಿಯು ಅಂತರ್ ವಲಯ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

Suddi Udaya

ಪಡಂಗಡಿ: ಅಪಾಯಕಾರಿ ಮರದ ಕೊಂಬೆಗಳ ತೆರವು

Suddi Udaya

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ 7 ಮಸೀದಿಗಳಿಗೆ ಮೃತದೇಹ ಸಂರಕ್ಷಣಾ ಫ್ರೀಝರ್ ಹಸ್ತಾಂತರ

Suddi Udaya

ಶ್ರೀ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳ ಸಭೆ

Suddi Udaya
error: Content is protected !!