September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ ನಿವಾಸಿ ಧೈರ್ಯ ಸಮಾಹಿತ ನವೀನ್ UIPM ವರ್ಲ್ಡ್ ಚಾಂಪಿಯನ್‌ಷಿಪ್‌ ಗೆ ಆಯ್ಕೆ

ಬೆಳ್ತಂಗಡಿ: ನಡ ಗ್ರಾಮದ ಮಂಚಕಲ್ ನಿವಾಸಿ, ನವೀನ್ ಸಂಜೀವ ಅವರ ಪುತ್ರ ಹಾಗೂ ಡಿ. ಆರ್.ಸಂಜೀವ ಡೊಡಡ್ಕ ಶಿರಾಡಿ ಅವರ ಮೊಮ್ಮಗ ಧೈರ್ಯ ಸಮಾಹಿತ ನವೀನ್ ಅವರು ದಕ್ಷಿಣ ಆಫ್ರಿಕಾದ ಮೊಸೆಲ್ ಬೇಯಲ್ಲಿ ನಡೆಯುವ UIPM ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಕೇಂದ್ರ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಇವರು ಡಿ.8 ರಿಂದ ಡಿ.11 ರವರೆಗೆ ದ.ಆಫ್ರಿಕಾದ ಮೋಸೆಲ್ ಬೇಯ ಸಂತೊಸ್ ಬೀಚ್‌ನಲ್ಲಿ ವಿಶ್ವದ 32 ರಾಷ್ಟ್ರಗಳ 1800 ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳ ಜೊತೆ ಸ್ಪರ್ಧಿಸುವಲ್ಲಿ, ಕರ್ನಾಟಕದಿಂದ ಅರ್ಹತೆ ಪಡೆದ ಇಬ್ಬರಲ್ಲಿ ಧೈರ್ಯ ಒಬ್ಬನಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವನು ಬಯಾಥ್ಲೆ, ಟ್ರಯಾಥ್ಲೆ ಮತ್ತು ಲೇಸರ್ ರನ್ ವಿಭಾಗಗಳಲ್ಲಿ ಸ್ಪರ್ಧಿಸಿದರು. ಇವು ಆಧುನಿಕ ಪೆಂಟಾಥ್ಲಾನ್‌ನ ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಂದಾಗಿದೆ.

Related posts

ರೆಖ್ಯ : ಪರಕಳದಲ್ಲಿ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

Suddi Udaya

ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ವಿನೂತನ ಕಾರ್ಯಕ್ರಮ ತುಡಿತ ಭಾಗ 4

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಸತ್ಸಂಗ”

Suddi Udaya

ಮಡಂತ್ಯಾರು ವಲಯ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಬಾರ್ಯ: ಅಕ್ರಮ ಗೋ ಮಾಂಸ ಮಾರಾಟ: ಪ್ರಕರಣ ದಾಖಲು

Suddi Udaya
error: Content is protected !!