29.8 C
ಪುತ್ತೂರು, ಬೆಳ್ತಂಗಡಿ
October 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

ಧರ್ಮಸ್ಥಳ : ಗ್ರಾಮ ಪಂಚಾಯತ್ ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ, ಸೇವಾಭಾರತಿ, ಕನ್ಯಾಡಿ, ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇದರ ಸಹಭಾಗಿತ್ವದಲ್ಲಿ ಸ್ವ- ಸಹಾಯ ಸಂಘದ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ ಡಿ 19 ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಚಾಲನೆ ನೀಡಿ, ಭಾಗವಹಿಸಿದ ಮಹಿಳೆಯರಿಗೆ ಶುಭಹಾರೈಸಿದರು. ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.

ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಮಾತನಾಡಿ, ಟೈಲರಿಂಗ್ ಕಲಿಕೆ ಅನೇಕ ಉದ್ಯೋಗದ ಅವಕಾಶಗಳನ್ನು ಒದಗಿಸಬಲ್ಲದು. “ದೀಪ ಜ್ಯೋತಿ ಹೇಗೆ ಬೆಳಗುತ್ತದೋ, ಹಾಗೆಯೇ ನೀವು ಈ ವಿದ್ಯೆಯನ್ನು ಉಪಯೋಗಿಸಿ ಸಮಾಜದಲ್ಲಿ ಬೆಳಗಬೇಕು” ಎಂದು ಶುಭ ಹಾರೈಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀಮತಿ ಗಾಯತ್ರಿ, NRLM ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಪ್ರತಿಮಾ, ಪಂಚಾಯತ್ ಲೆಕ್ಕ ಸಹಾಯಕರು ಶ್ರೀಮತಿ ಪ್ರಮೀಳಾ, ದುರ್ಗಾಮಾತೃ ಮಂಡಳಿ ಅಧ್ಯಕ್ಷರು ಹಾಗೂ ಸಬಲಿನಿ ಯೋಜನೆಯ ಸಂಚಾಲಕಿ ಶ್ರೀಮತಿ ಮಮತಾ ಬಿ, ಕೌಶಲ್ಯ ವಲಯ ಮೇಲ್ವಿಚಾರಕರು ಶ್ರೀಮತಿ ವೀಣಾಶ್ರೀ ಕೆ. ಕೆ, ಪಂಚಾಯತ್ ಸದಸ್ಯರು ಶ್ರೀಮತಿ ವಸಂತಿ, ಶ್ರೀಮತಿ ಸುನಿತಾ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಶ್ರೀಮತಿ ಶಾಂಭವಿ ಹಾಗೂ ಟೈಲರಿಂಗ್ ತರಬೇತುದಾರರಾದ ಶ್ರೀಮತಿ ಸುಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 40 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ರವರು ಮಾನ್ವಿಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟಕ್ಕೆ 3 ಹೊಲಿಗೆ ಯಂತ್ರ ನೀಡುವುದಾಗಿ ತಿಳಿಸಿದ್ದು ಇದು ಮಹಿಳಾ ಸಬಲೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಕೃಷಿ ಸಖಿ ಶ್ರೀಮತಿ ಸುಚೇತಾ ಸ್ವಾಗತಿಸಿ, ಎಮ್.ಬಿ.ಕೆ ಶ್ರೀಮತಿ ಚಂದ್ರಾವತಿ ನಿರೂಪಿಸಿ, LCRP ಶ್ರೀಮತಿ ಪುಷ್ಪಾವತಿ ಧನ್ಯವಾದವಿತ್ತರು.

Related posts

ಪಿಲ್ಯ: ಉದ್ಯಮಿ ಆರಿಸ್ ಬಿಜೆಪಿ ಸೇರ್ಪಡೆ

Suddi Udaya

ಮುಂಡಾಜೆ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ದ್ವಿಷಾ ಯು.ಡಿ ಗೆ ರಾಜ್ಯ ಪ್ರಶಸ್ತಿ

Suddi Udaya

ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಡಾ|| ಹೆಗ್ಗಡೆಯವರು ಪ್ರೇರಣೆ: ಮೋಹನ್ ಕುಮಾರ್

Suddi Udaya

ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಗೇರಡ್ಕ – ದಂಬೆತ್ತಿಮಾರು ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

Suddi Udaya

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya
error: Content is protected !!