July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುದುವೆಟ್ಟು ಶ್ರೀ ಧ.ಮಂ. ಅ.ಹಿ. ಪ್ರಾ. ಶಾಲೆಯ ವಾರ್ಷಿಕ ಪ್ರತಿಭಾ ದಿನಾಚರಣೆ

ಪುದುವೆಟ್ಟು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ನಿವೃತ್ತ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸೋಮಶೇಖರ ಶೆಟ್ಟಿ ಅವರು ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಲೆಯು ಯಾವ ಆಂಗ್ಲ ಮಾಧ್ಯಮ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿದೆ, ಪೂಜ್ಯರ ಖಾವಂದರ, ಊರಿನ ಪೋಷಕರ ಪರಿಶ್ರಮ ಸಹಕಾರ ಒಳ್ಳೆಯ ರೀತಿಯಲ್ಲಿ ಇರುವುದರಿಂದ ಈ ಶಾಲೆ ಇಷ್ಟೊಂದು ಮುಂದುವರಿಯಲು ಸಾಧ್ಯ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿಯನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ಮಾತನಾಡಿ ಈ ಶಾಲೆಗೆ ಪೋಷಕರ ಸಹಕಾರ ಕಂಡು ಬಹಳಷ್ಟು ಸಂತೋಷವಾಯಿತು ಹಳ್ಳಿಯ ಶಾಲೆಗಳು ಇನ್ನಷ್ಟು ಉತ್ತಮ ಶಿಕ್ಷಣವನ್ನು ನೀಡಿ ಮುಂದುವರಿಯಬೇಕು ಎಂದರು.

ಈ ವೇಳೆ ಸ್ಥಳೀಯ ಪ್ರಗತಿಪರ ಕೃಷಿಕ ಚಿತ್ತರಂಜನ್ ಜೈನ್, ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಶಶಿಧರ್ ಜಿ, ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ, ಬೋಲ್ಮನಾರಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಪಿಲತೇರಿ, ಕ್ಷೇತ್ರದ ಮಣೆಗಾರರಾದ ವಸಂತ ಮಂಜಿತ್ತಾಯ, ಗಿರೀಶ್ ಕುದ್ರಂತಾಯ, ರಂಜಿತ್, ನಿವೃತ್ತ ಮುಖ್ಯ ಶಿಕ್ಷಕರಾದ ಜಿ ಶ್ರೀಧರನ್ ನಾಯರ್, ಅಬ್ದುಲ್ ಗಪೂರ್, ಸ್ಥಳೀಯ ಚರ್ಚಿನ ಧರ್ಮ ಗುರುಗಳು, ವನದುರ್ಗಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಬೊಮ್ಮಣ್ಣ ಗೌಡ, ಮೆಸ್ಕಾಂ ನ ಜೆಎ ಸುಹಾಸ್, ಬೇರೆ ಬೇರೆ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪೋಷಕರಿಗೆ ಹಾಗೂ ಕಲಿಯುವಿಕೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿಯಾದ ಶ್ರೀಮತಿ ತೇಜಾವತಿ ಮತ್ತು ಶ್ರೀಮತಿ ಶೀಲಾ ಎನ್ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಚಿಗುರು ಹಸ್ತ ಪ್ರತಿಯನ್ನು ಎಸ್.ಡಿ.ಎಂ ಡಿ. ಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಊರ ಪರ ಊರ ಹಳೆ ವಿದ್ಯಾರ್ಥಿಗಳು, ವಿದ್ಯಾ ಅಭಿಮಾನಿಗಳು ಪೋಷಕರು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳು ಉಪಸ್ಥಿತರಿದ್ದು ಸಹಕರಿಸಿದರು.

ಶಾಲೆಯ ಈ ವರ್ಷದ ವರದಿ ವಾಚನವನ್ನು ಶಾಲಾ ಮುಖ್ಯ ಶಿಕ್ಷಕ ಶೀನಪ್ಪಗೌಡವಾಚಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಯಕ್ಷಗಾನ, ಪುಣ್ಯಕೋಟಿ ಕಥಾರೂಪಕ ಪ್ರಸ್ತುತಪಡಿಸಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯಾದ ಶ್ರೀಮತಿ ಪುಷ್ಪಲತಾ ಮತ್ತು ಕುಮಾರಿ ಜಿತೀಕ್ಷಾ ನೆರವೇರಿಸಿಕೊಟ್ಟರು. ಯಕ್ಷಗಾನ ಪ್ರದರ್ಶನ ಅರುಣ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಡಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಪುತ್ತಿಲ ನಡುಕೇಯ೯ ತರವಾಡು ಟ್ರಸ್ಟ್‌ನಿಂದ ಕೊಯ್ಯೂರು ರಾಮಣ್ಣ ಪೂಜಾರಿ ದಂಪತಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Suddi Udaya

ಧರ್ಮಸ್ಥಳದಲ್ಲಿ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭ

Suddi Udaya

ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಮಹಿಳಾ ಬಂಟರ ವಿಭಾಗ ಹಾಗೂ ತಾಲೂಕು ಯುವ ಬಂಟರ ವಿಭಾಗ ನೇತೃತ್ವ ಗುರುವಾಯನಕೆರೆಯಲ್ಲಿ ಸಂಭ್ರಮದ ಬಂಟೋತ್ಸವ

Suddi Udaya

ಲಾಯಿಲ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಶ್ರದ್ದೇಶ್ ಗಾಣಿಗ, ಕಾರ್ಯದರ್ಶಿಯಾಗಿ ಅಜಯ್

Suddi Udaya

ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ

Suddi Udaya
error: Content is protected !!