ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಂ ಕಾಲೇಜು : ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪೂರ್ವಾಭ್ಯಾಸ ಶಿಬಿರ

ಉಜಿರೆ : ಹರಿಯಾಣ ರಾಜ್ಯದ ರಾಣಿ ಪತ್ನಲ್ಲಿ ನಡೆಯಲಿರುವ ಎಸ್‌ಜಿಎಫ್‌ಐ (SGFI) ವಯೋಮಿತಿ – 19 ಬಾಲಕರ ವಿಭಾಗದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡವು ಆಯ್ಕೆಯಾಗಿದ್ದು, ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಕಬಡ್ಡಿ ಕ್ರೀಡಾ ಪಟುಗಳಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ.

ಈ ಬಾರಿ ಕರ್ನಾಟಕ ತಂಡವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ತಂಡವು ಪ್ರತಿನಿಧಿಸಲಿದ್ದು, ಈಗಾಗಲೇ ತಂಡಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 12 ವಿದ್ಯಾರ್ಥಿಗಳನ್ನು ಒಳಗೊಂಡಿರುವ ರಾಜ್ಯ ತಂಡವು ಪೂರ್ವಾಭ್ಯಾಸ ಶಿಬಿರದಲ್ಲಿ ಸಜ್ಜಾಗುತ್ತಿದೆ. ಶಿಬಿರವು ಇನ್ನು 4 ದಿನಗಳ ಕಾಲ ಕ್ರೀಡಾಂಗಣದಲ್ಲಿ ನಡೆಯಲಿದೆ. ತಂಡದ ನಾಯಕತ್ವವನ್ನು ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸತ್ಯ ವಹಿಸಿಕೊಂಡಿದ್ದು, ತಂಡದ ತರಬೇತಿಯನ್ನು ಅನುಭವಿ ತರಬೇತಿದಾರರಾದ ಕೃಷ್ಣಾನಂದರಾವ್ ಅವರು ನಡೆಸುತ್ತಿದ್ದಾರೆ.

ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಬಾಲಕರ ಕಬಡ್ಡಿ ತಂಡವು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಪಂದ್ಯಾಟದಲ್ಲಿ ಚಾಂಪಿಯನ್ ಗಳಾಗಿ ಹೊರಹೊಮ್ಮಿ, ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ತಂಡಕ್ಕೆ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿ, ಶುಭ ಹಾರೈಸಿದ್ದರು.

Related posts

ಪದ್ಮಂಜ ಸೇವಾ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಗೇರುಕಟ್ಟೆ: ಬಿಜೆಪಿ ಬೃಹತ್ ಪ್ರಚಾರ ಸಭೆ

Suddi Udaya

ಬೆಳ್ತಂಗಡಿ: ತೋಟಗಾರಿಕೆ ಇಲಾಖೆಯಲ್ಲಿ ಮೆಗಾ ಡ್ರೈವ್ ಕಾರ್ಯಕ್ರಮ

Suddi Udaya

ಧರ್ಮಸ್ಥಳ ನಾರ್ಯ ದಲ್ಲಿ ಸೇತುವೆ ಕುಸಿತ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದಿಂದ “ಕನಸು ಇದು ಭರವಸೆಯ ಬೆಳಕು”: ವಿದ್ಯಾರ್ಥಿಗಳೊಂದಿಗೆ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

Suddi Udaya

ಗೇರುಕಟ್ಟೆ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya
error: Content is protected !!