July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಅಧ್ಯಯನ ತಂಡ ಭೇಟಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳ ಕುರಿತು ಅಧ್ಯಯನ ನಡೆಸಲು ವಿದೇಶಗಳು ಉತ್ಸಕರಾಗಿದ್ದು ಪ್ರತಿ ವರ್ಷ ಬೇರೆ ಬೇರೆ ದೇಶಗಳ ಅಧ್ಯಯನ ತಂಡಗಳು ಆಗಮಿಸುತ್ತಿರುತ್ತವೆ. ಇತ್ತೀಚೆಗೆ ಅಮೇರಿಕಾದ ಪೆನ್ಸಿಲ್ವೇನಿಯ ತಂಡ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ವಿಶೇಷ ಅಧ್ಯಯನವನ್ನು ನಡೆಸಿತು.

ಹತ್ತು ಸದಸ್ಯರನ್ನೊಳಗೊಂಡ ತಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳನ್ನು ಭೇಟಿ ಮಾಡಿ ಶ್ರೀ ಕ್ಷೇತ್ರದ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಿ ಮಾಹಿತಿಗಳನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಶ್ರೀ ಹೆಗ್ಗಡೆಯವರ ಸಾಧನೆಗಳನ್ನು ಗುರುತಿಸಿ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯವು ಹೆಗ್ಗಡೆಯವರಿಗೆ ‘ವಿಷನರಿ ಲೀಡರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.


ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿದ ಅಧ್ಯಯನ ತಂಡಕ್ಕೆ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್. ರವರು ಮಾಹಿತಿಯನ್ನು ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಿ.ಸಿ. ಕಾರ್ಯಚಟುವಟಿಕೆಗಳ ಮೂಲಕ ಬ್ಯಾಂಕ್‌ಗಳಿಂದ ಅತೀ ಕಡಿಮೆ ಬಡ್ಡಿ ದರದಲ್ಲಿ ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡುವ ಮೂಲಕ ಲಕ್ಷಾಂತರ ಬಡವರ ಬದುಕನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದೆ. ಗ್ರಾಮಾಭಿವೃದ್ಧಿ ಯೋಜನೆಯ ಈ ಸಾಧನೆ ವಿಶ್ವಕ್ಕೆ ಮಾದರಿಯಾಗಿದೆಯೆಂದು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಸೀನಿಯರ್ ಪ್ರೊಫೆಸರ್ ಫೆಮಿಡ ಹ್ಯಾಂಡಿಯವರು ಅಭಿಪ್ರಾಯಪಟ್ಟರು.

ಪುರಾತನ ವಸ್ತುಗಳ ವೀಕ್ಷಣೆಗಾಗಿ ಕ್ಷೇತ್ರದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಅಧ್ಯಯನ ತಂಡಕ್ಕೆ ಶ್ರೀಮತಿ ಶ್ರದ್ಧಾ ಅಮಿತ್‌ರವರು ಮಂಜೂಷಾದ ಹುಟ್ಟು, ಉದ್ದೇಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಅನ್ನಪೂರ್ಣ ಭೋಜನಾಲಯ, ಸಿರಿ ಸಂಸ್ಥೆಯ ಕೇಂದ್ರ ಕಚೇರಿಗೆ ತಂಡ ಭೇಟಿ ನೀಡಿತು.

Related posts

ಗುರುವಾಯನಕೆರೆ ಯಕ್ಷಗಾನ ನಾಟ್ಯ ತರಗತಿಗೆ ಚಾಲನೆ

Suddi Udaya

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ 2025

Suddi Udaya

ಪದ್ಮುಂಜ ಪ್ರಾ.ಕೃ.ಪ. ಸಹಕಾರಿ ಸಂಘದ ಪ್ರಭಾರ ಸಿಇಒ ಆಗಿ ಅಂಕಿತಾ ಬಿ ಅಧಿಕಾರ ಸ್ವೀಕಾರ

Suddi Udaya

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

Suddi Udaya

ನಾವೂರು ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲ ದೊರೆರಾಜು

Suddi Udaya
error: Content is protected !!