ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜ.18: ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ

ಮಡಂತ್ಯಾರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಡಂತ್ಯಾರು ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಮಡವು, ಜೆಸಿಐ ಮಡಂತ್ಯಾರು, ಹೈಸ್ಕೂಲ್ ರಿಯೂನಿಯನ್ ಮಡಂತ್ಯಾರು ಹಾಗೂ ರೋಟರಿ ಕ್ಲಬ್ ಮಡಂತ್ಯಾರು ಇವರ ಜಂಟಿ ಸಹಯೋಗದೊಂದಿಗೆ ಜ.18 ರಂದು ಪೂರ್ವಾಹ್ನ 9.30 ರಿಂದ ಅಪರಾಹ್ನ 12.30ರ ವರೆಗೆ ಕಲಾ (ಆಶೀರ್ವಾದ್) ಸಭಾಂಗಣ, ಶ್ರೀದುರ್ಗಾ ಕಾಂಪ್ಲೆಕ್ಸ್, ಮುಖ್ಯರಸ್ತೆ, ಮಡಂತ್ಯಾರು ಇಲ್ಲಿ ಆಯೋಜಿಸಲಾಗಿದೆ.

ಈ ವೈದ್ಯಕೀಯ ಶಿಬಿರದಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆಯ ನುರಿತ ವೈದ್ಯರ ತಂಡದವರಿAದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತç ಚಿಕಿತ್ಸೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಮಧುಮೇಹ ತಪಾಸಣೆ, ಬಿ.ಪಿ. ತಪಾಸಣೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ, ಯೆನಪೋಯ ದೇರಳಕಟ್ಟೆ ಇವರ ನುರಿತ ವೈದ್ಯರ ತಂಡದವರಿಂದ ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಶುಚಿಗೊಳಿಸುವುದು, ರೋಗಗ್ರಸ್ತ ಹಲ್ಲುಗಳನ್ನು ಕೀಳುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಹಸಿರು ಕಾರ್ಡನ್ನು ನೀಡಲಾಗುವುದು. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಗುವುದು.
ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Related posts

ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಹಾಗೂ ಗಲ್ಫ್ ಸಮಿತಿ ನೇತೃತ್ವದಲ್ಲಿ; ಜ. 7 : ಪರಿಮ ಜಾರಿಗೆ ಬೈಲಿನಲ್ಲಿ ಏಕದಿನ ಮತ ಪ್ರಭಾಷಣ – ಸನ್ಮಾನ ಕಾರ್ಯಕ್ರಮ

Suddi Udaya

ಉಜಿರೆ: ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆ, ನೂರಾರು ಭಕ್ತರು ಭಾಗಿ

Suddi Udaya

ಕೂತ್ಲೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಉಷಾ ಆಯ್ಕೆ

Suddi Udaya

ಇಂದಬೆಟ್ಟು: ಕಜೆ ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘ-ಅಧ್ಯಕ್ಷರಾಗಿ ಉಮೇಶ್ ಗೌಡ, ಉಪಾಧ್ಯಕ್ಷರಾಗಿ ಪ್ರೇಮಲತಾ

Suddi Udaya

ಜೇಸಿಐ ವಲಯ 15ರ ತಾತ್ಕಾಲಿಕ ವಲಯ ತರಬೇತುದಾರರಾಗಿ ಚಂದ್ರಹಾಸ ಬಳಂಜ ಆಯ್ಕೆ

Suddi Udaya

ಬೆಳಾಲು ಶ್ರೀ ಮಹಮ್ಮಾಯಿ ಗುಳಿಗ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya
error: Content is protected !!