ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಂಚ ಗುರಿಪಳ್ಳ ಇವರಿಗೆ ವಾಟರ್ ಬೆಡ್ ಹಸ್ತಾಂತರ

ಬೆಳ್ತಂಗಡಿ: ಉಜಿರೆಯಲ್ಲಿ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಬಸ್ಸು ಡಿಕ್ಕಿ ಹೊಡೆದು ಗುರಿಪಳ್ಳ ನಿವಾಸಿ ಮಂಚ ಮುಗೇರ ಇವರಿಗೆ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಭೇಟಿಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಇವರ ಆರೋಗ್ಯ ವಿಚಾರಿಸಿ, ವಾಟರ್ ಬೆಡ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವೈದ್ಯರಿಂದ ರೋಗಿಯ ಆರೋಗ್ಯದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪತ್ನಿ ಗಿರಿಜಾ, ಮಗ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ನಾಗೇಶ್ ಎಂ. ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಕುಟುಂಬ ಸದಸ್ಯರಾದ ಪ್ರವೀಣ, ಹರೀಶ್, ಸರಸ್ವತಿ ಜಗದೀಶ್, ಪ್ರಮುಖರಾದ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ಗ್ರಾಮೀಣ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಯಶೋದರ ಗೌಡ ಕೊಡ್ಡೋಳು, ಕೇಶವ ಎಂ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಸಂಜಯನಗರ ನಿವಾಸಿ ಸೇಸಮ್ಮ ನಿಧನ

Suddi Udaya

ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಷಾ ವಿವಾದಾತ್ಮಕ ಹೇಳಿಕೆ ಹಾಗೂ ಸಚಿವೆ ವಿರುದ್ಧ ಸಿ.ಟಿ ರವಿ ಹೇಳಿಕೆ ವಿರೋಧಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Suddi Udaya

ಬೆಳ್ತಂಗಡಿ: ಎಸ್.ಐ.ಟಿ. ಪೊಲೀಸ್ ಠಾಣೆಗೆ ದೂರುದಾರ ಜಯಂತ್ ಟಿ. ಭೇಟಿ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಒಂದೇ ದಿನ ಮೂರು ವಾಹನಗಳು ಪಲ್ಟಿ

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1,ಲಕ್ಷ ದೇಣಿಗೆ

Suddi Udaya

ಶಾಸಕ ಹರೀಶ್ ಪೂಂಜಾರವರ ಜನುಮದಿನದ ಪ್ರಯುಕ್ತ ಬಂದಾರು ಅಭಿಮಾನಿ ಬಳಗದಿಂದ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya
error: Content is protected !!