July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಿಂದೂ ಕಮಿಟಿ ಹರ್ಜ್ಲಿಯಾ ವತಿಯಿಂದ ಇಸ್ರೇಲ್ ನಲ್ಲಿ 9ನೇ ವರ್ಷದ ಅಯ್ಯಪ್ಪ ಸ್ವಾಮಿ ಪೂಜೋತ್ಸವ

ಬೆಳ್ತಂಗಡಿ: ಹಿಂದೂ ಕಮಿಟಿ ಹರ್ಜ್ಲಿಯಾ ಇಸ್ರೇಲ್ ಇದರ ವತಿಯಿಂದ 9ನೇ ವರ್ಷದ ಅಯ್ಯಪ್ಪ ಸ್ವಾಮಿ ಪೂಜೋತ್ಸವವು ಜ.17 ರಂದು ಹರ್ಜ್ಲಿಯಾದಲ್ಲಿ ಜರುಗಿತು.

ಅರ್ಚಕರಾದ ರಾಜೇಶ್ ಸಾಲಿಯಾನ್ ಹಾಗೂ ಗಣೇಶ್ ಆಚಾರ್ಯರವರ ಪೌರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ಭಜನಾ ಕಾರ್ಯಕ್ರಮದ ಮೂಲಕ ಅಯ್ಯಪ್ಪ ಸ್ವಾಮಿಯನ್ನು ಭಕ್ತಿಯಿಂದ ಸ್ತುತಿಸಲಾಯಿತು.

ಹಿರಿಯ ಭಜಕರಾದ ಸುಧೀರ್ ಕೋಟ್ಯಾನ್ ರವರು ನೆರೆದಿದ್ದ ಭಕ್ತಸಮೂಹದ ಪರವಾಗಿ ಸರ್ವಜನಹಿತ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಶಶಿ ಕುಂದಾಪುರರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಹಿಂದೂ ಕಮಿಟಿ ಹರ್ಜ್ಲಿಯಾ ಇದರ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಕುವೆಟ್ಟು: ಸ. ಉ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕರ್ನಾಟಕ ಮುಸ್ಲಿಮ್ ಜಮಾಅತ್ ಗುರುವಾಯನಕೆರೆ ಸರ್ಕಲ್ ವಾರ್ಷಿಕ ಮಹಾಸಭೆ

Suddi Udaya

ಅ.29: ಉಜಿರೆಯಿಂದ ಧರ್ಮಸ್ಥಳಕ್ಕೆ ಧರ್ಮಸಂರಕ್ಷಣ ಪಾದಯಾತ್ರೆ:  ವಾಹನಗಳಿಗೆ ರಸ್ತೆ ಬದಲಾವಣೆ

Suddi Udaya

ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

Suddi Udaya

ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಡಾ. ಅಖಿಲ ತೇಜಸ್ವಿ ಆರ್. ಅವರಿಗೆ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪಾರಾಧನೆ ರಂಗಪೂಜೆ

Suddi Udaya
error: Content is protected !!