September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ

ಉಜಿರೆ: ಅಮೆರಿಕದಲ್ಲಿ ಖ್ಯಾತ ಹೃದಯ ಹಾಗೂ ಥೊರಾಸಿಕ್ ( Thorasic ) ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಯು. ರಾಮಯ್ಯ ಗೌಡ ಹಾಗೂ ಅವರ ಪತ್ನಿ, ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಕೊನ್ನಿ ಗೌಡ ( Connie Gowda ) ಅವರು ಇತ್ತೀಚೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ಭೇಟಿ ನೀಡಿದರು.

1939ರಲ್ಲಿ ಜನಿಸಿದ ಡಾ. ರಾಮಯ್ಯ ಗೌಡ ಅವರು ಬೆಳ್ತಂಗಡಿಯ ವಳಂಬ್ರ ಕುಟುಂಬಕ್ಕೆ ಸೇರಿದವರು. ಕಡಿರುದ್ಯಾವರ ಸರ್ಕಾರಿ ಶಾಲೆ ಹಾಗೂ ಉಜಿರೆಯ ಎಸ್‌ಡಿಎಂ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿ, ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದಾರೆ. 1965ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ಹೃದಯ ಮತ್ತು ಥೊರಾಸಿಕ್ ( Thorasic )ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದು ನ್ಯೂಯಾರ್ಕ್ ಹಾಗೂ ಗ್ರಾಹಂ ಮೆಡಿಕಲ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ನಿವೃತ್ತಿಯ ನಂತರವೂ ಯಾವುದೇ ಸಂಬಳವಿಲ್ಲದೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸ್ವದೇಶಕ್ಕೆ ಆಗಮಿಸಿದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ವಿಶೇಷ. ಎಸ್‌ಡಿಎಂ ಆಸ್ಪತ್ರೆ ಆಡಳಿತ ಮಂಡಳಿ ಮುಖ್ಯಸ್ಥರಾದ ಎಂ ಜನಾರ್ದನ್, ವೈದ್ಯರು ಹಾಗೂ ಸಿಬ್ಬಂದಿ ಡಾ. ರಾಮಯ್ಯ ಗೌಡ ಕುಟುಂಬವನ್ನ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

Related posts

ಉಜಿರೆಯಲ್ಲಿ ರಕ್ತದಾನ ಶಿಬಿರ; 167 ಯೂನಿಟ್ ರಕ್ತ ಸಂಗ್ರಹ

Suddi Udaya

ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕ್ರೀಡೋತ್ಸವ: ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಮಡಂತ್ಯಾರು: ಎಸ್‌ಎಸ್‌ಎಲ್‌ಸಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ತೃಪ್ತಿ ಕೆ.ಗೆ ಅಭಿನಂದನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸಹಾಯಧನ ವಿತರಣೆ

Suddi Udaya

ಮುಂಡಾಜೆ ಸೀಟು ಬಳಿಯ ಸಿಸಿ ಕ್ಯಾಮೆರಾ ಎಗರಿಸಿದ ಕಳ್ಳರು

Suddi Udaya

ಅಕ್ರಮ ಇಸ್ಪೀಟು ಅಡ್ಡೆಗೆ ಪೊಲೀಸ್ ದಾಳಿ: ನಗದು ಹಾಗೂ ಸೊತ್ತುಗಳ ಸಹಿತ 23 ಮಂದಿ ವಶ

Suddi Udaya
error: Content is protected !!