ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪಟ್ಟಣದಲ್ಲಿ ನಿಲ್ಲದ ಚಿರತೆ ಹಾವಳಿ: ದಾಳಿಗೆ ಸುದೆಮುಗೇರುವಿನಲ್ಲಿ ನಾಯಿ ಬಲಿ

ಬೆಳ್ತಂಗಡಿ : ಕಳೆದ ಕೆಲವು ದಿನಗಳಿಂದ ಬೆಳ್ತಂಗಡಿ ನಗರದಲ್ಲಿ ಚಿರತೆ ಓಡಾಟ ಮುಂದುವರಿದಿದ್ದು ಜನರಲ್ಲಿ ಆತಂಕ ಮತ್ತುಷ್ಟು ಹೆಚ್ಚಿದೆ. ಇಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಬೆಳ್ತಂಗಡಿ ಸುದೆಮುಗೇರು ವನ್ಯಜೀವಿ ಇಲಾಖೆ ಸಮೀಪ ಪರಿಸರದಲ್ಲಿ ಚಿರತೆ ದಾಳಿಗೆ ನಾಯಿ ಬಲಿಯಾಗಿದೆ. ಆ ಪ್ರದೇಶದ ಜನರು ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದ ಚಿರತೆಯನ್ನು ಕಂಡು ಭಯಭೀತರಾಗಿದ್ದಾರೆ. ಮನೆಯ ಕಿಟಕಿಯಲ್ಲಿ ಚಿರತೆ ಓಡಾಟವನ್ನು ಗಮನಿಸಿದ ನಿವಾಸಿಗಳು ಮನೆಯ ಬಾಗಿಲನ್ನು ಮುಚ್ಚಿ ಆತಂಕದಿಂದ ಕುಳಿತುಕೊಂಡಿದ್ದಾರೆ.

ಇನ್ನೂ ಈ ರಸ್ತೆ ಮೂಲಕ ಶಾಲಾ ಮಕ್ಕಳು ಅನೇಕ ಮಂದಿ ಉದ್ಯೋಗಿಗಳು ಸಂಚಾರಿಸುವ ದಾರಿಯಾಗಿದ್ದು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಿನ್ನೆ ಉದಯನಗರ ಬಳಿ ಕಾಣಿಸಿಕೊಂಡಿದ್ದ ಚಿರತೆ ಶೀಘ್ರವೇ ಬೆಳ್ತಂಗಡಿ ಪಟ್ಟಣ ತಲುಪುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣವೇ ಚಿರತೆ ಸೆರೆಗೆ ಬೋನ್ ಅಳವಡಿಸುವಂತೆ ಒತ್ತಾಯಿಸಿದ್ದಾರೆ.

Related posts

ಓಡಿಲ್ನಾಳ: ಮೈರಲ್ಕೆ ಪಶುಪತಿ ಕೃಪಾ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರರ ಪ್ರಾಯೋಜಕತ್ವದಲ್ಲಿ “ಕುಮಾರ ವಿಜಯ” ಯಕ್ಷಗಾನ ಹಾಗೂ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆಸಲ್ಲಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಕಟ್ಟಡ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವದಿಂದ ಕಾರ್ಮಿಕರಿಗೆ ಕೆಲಸ ಲಭಿಸದಿರುವ ಕುರಿತು ಹಾಗೂ ಹೊರರಾಜ್ಯದ ಕಾರ್ಮಿಕರನ್ನು ನೋಂದಣಿಗೊಳಿಸುವಂತೆ ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದಿಂದ ತಹಶೀಲ್ದಾರ್, ಹಾಗೂ ಪೊಲೀಸ್ ಠಾಣೆಗೆ ಮನವಿ

Suddi Udaya

ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ : ವಾರೀಸುದಾರರ ಪತ್ತೆಗಾಗಿ ಮನವಿ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಕೊನೆಗೂ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಪ್ರಶಿಕ್ಷಣ ಕಾರ್ಯಕ್ರಮ

Suddi Udaya
error: Content is protected !!