September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೊಳಪಟ್ಟ ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಯವರಾದ ವೆಂಕಟ್ರಮಣ ರಾವ್ ಆಗಮಿಸಿ ಪಂಚ ಪರಿವರ್ತನೆಗಳಾದ ಕುಟುಂಬ ಪ್ರಬೋಧನ, ಸಾಮರಸ್ಯ, ಪರ್ಯಾವರಣ, ಸ್ವದೇಶಿ ವಸ್ತುಗಳ ಉಪಯೋಗ, ನಾಗರಿಕ ಶಿಷ್ಟಾಚಾರವನ್ನು ವಿದ್ಯಾರ್ಥಿಗಳು ಮೈಗೂಡಿಸುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯಚಂದ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಗೀತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತಿಸಿದರು.


ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ದೀಪವನ್ನು ನೀಡುವುದರ ಮೂಲಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಅನನ್ಯಾ ಕಾರ್ಯಕ್ರಮವನ್ನು ನಿರೂಪಿಸಿ, ಧನುಷ್ ಧನ್ಯವಾದಗೈದರು.

Related posts

ಸ್ಟಾರ್ ಲೈನ್ ಆಂ.ಮಾ. ಶಾಲೆ ರಝ ಗಾರ್ಡನ್ ಮಂಜೊಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ಭಜನಾ ತಂಡದ ಸದಸ್ಯರಿಗೆ ಸಮವ‌ಸ್ತ್ರ ವಿತರಣೆ

Suddi Udaya

ಗೇರುಕಟ್ಟೆ ಮನ್‌ಶರ್ ಕ್ಯಾಂಪಸ್‌ನಲ್ಲಿ ಪ.ಪೂ ವಿಜ್ಞಾನ ವಿಭಾಗ ಆರಂಭಿಸಲು ಸರಕಾರದಿಂದ ಅಧಿಕೃತ ಅನುಮೋದನೆ

Suddi Udaya

ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ಅಭೂತಪೂರ್ವ ಸಾಧನೆ

Suddi Udaya

ಮದ್ದಡ್ಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಭ್ಯರ್ಥಿಗಳ ಅವಿರೋಧ ಆಯ್ಕೆ

Suddi Udaya

ಅರಸಿನಮಕ್ಕಿ: ಪಡ್ಡಾಯಿಬೆಟ್ಟು ನಿವಾಸಿ ನಿವೃತ್ತ ಶಿಕ್ಷಕ ತಿರುಮಲೇಶ್ವರ ಭಟ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!