September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾ.3: ಚಂದ್ರಗ್ರಹಣ ಪ್ರಯುಕ್ತ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ

ಧರ್ಮಸ್ಥಳ: ಮಾರ್ಚ್ ಮೂರರಂದು ಮಂಗಳವಾರ ಅಪರಾಹ್ನ ಗಂಟೆ 3.19 ರಿಂದ ಸಂಜೆ ಗಂಟೆ 6.48ರ ವರೆಗೆ ಚಂದ್ರಗ್ರಹಣ ಇರುವುದರಿಂದ ಮಂಗಳವಾರ ಮಧ್ಯಾಹ್ನ ಒಂದೂವರೆ ಗಂಟೆ ವರೆಗೆ ಮಾತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಸ್ಥಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾತ್ರಿ ಗಂಟೆ 7.30ರ ನಂತರ ಚಂದ್ರಗ್ರಹಣ ಮುಕ್ತಾಯವಾದ ಬಳಿಕ ದೇವಸ್ಥಾನದ ಶುದ್ಧೀಕರಣ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನಗಳು ಮುಗಿದ ನಂತರ ದೇವರ ದರ್ಶನಕ್ಕೆ ಅವಕಾಶವಿದೆ.
ದೂರದ ಊರುಗಳಿಂದ ಬರುವ ಭಕ್ತರು ದೇವರ ದರ್ಶನದ ಸಮಯ ವ್ಯತ್ಯಯವನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊಬೈಲ್ 9945725511

Related posts

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕ ದೀಪಕ್ ಎ.ಎಸ್. ಲೋಕಸಭಾ ಸಂಸದ ಬ್ರಿಜೇಶ್ ಚೌಟರ ಭೇಟಿ

Suddi Udaya

ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಧರ್ಮಸ್ಥಳ ಗ್ರಾ.ಪಂ. ಯಿಂದ ಪ್ಲಾಸ್ಟಿಕ್ ನಿಷೇಧ ಬಗ್ಗೆ ವ್ಯಾಪಾರ ಕೇಂದ್ರಗಳ ಮೇಲೆ ಕಾರ್ಯಾಚರಣೆ

Suddi Udaya

ಉಜಿರೆ ರುಡ್‌ಸೆಟ್‌ನ 2022-23 ರ ಸಾಲಿನ ವಾರ್ಷಿಕ ವರದಿ ಬಿಡುಗಡೆ

Suddi Udaya

ಬೊಳಿಯಾರು ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ: ಆಟೋ ಚಾಲಕ ದಿನೇಶ್‌ರವರನ್ನು ಭೇಟಿಯಾದ ರಕ್ಷಿತ್ ಶಿವರಾಂ

Suddi Udaya

ಮಾ.2: ಭಾರತ್ ಬ್ಯಾಂಕ್ ಮುಂಬೈ ಇದರ ಬೆಳ್ತಂಗಡಿ ಕಚೇರಿ ಆರಂಭ: ಕೇಂದ್ರ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕೃತ ಉದ್ಘಾಟನೆ

Suddi Udaya
error: Content is protected !!