September 6, 2026
ಧಾರ್ಮಿಕವರದಿ

ಮಾ.4-6: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ- ಹರೀಶ್ ಪೂಂಜ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ॥ ಡಿ. ವೀರೇಂದ್ರ ಹೆಗ್ಗಡೆಯವರು ಶುಭಾಶ್ರೀರ್ವಾದಗಳೊಂದಿಗೆ ಎಡಪದವು ಶ್ರೀ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಮಂಜುನಾಸ ಭಟ್ ಅಂತರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ. 4ರಿಂದ 6 ರವರೆಗೆ ನಡೆಯಲಿರುವುದು. ಈ ಪುಣ್ಯ ಕಾರ್ಯ ಕ್ರಮಗಳಿಗೆ ತಾವೆಲ್ಲರೂ ಆಗಮಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಪ್ರತಿಷ್ಠಾ ಮಹೋತ್ಸವ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಸೋಮವಾರ ಉರುವಾಲು ಪದವಿನ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಮಾತನಾಡಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯವನ್ನು ಅಂದಾಜಿಸಲಾಗಿದ್ದು ಈಗಾಗಲೇ ದಾನಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಉತ್ಸವಕ್ಕೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.

ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ರಾಘವ ನಾಯ್ಕ ಜಲದುರ್ಗಾ, ಪ್ರಧಾನ ಕಾರ್ಯದರ್ಶಿ ಚಿದಾನಂದ ನಾಯ್ಕ, ಉರುವಾಲು ಮಹಮ್ಮಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ್ ನಾಯ್ಕ, ಕಾರ್ಯದರ್ಶಿ ಉಮೇಶ್ ನಾಯ್ಕ ಎಂಜಿರಪಲ್ಕೆ, ಉರುವಾಲು ಮಹಮ್ಮಾಯಿ ಮಾರಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಸೀತಾರಾಮ ನಾಯ್ಕ, ಗೌರವ ಸಲಹೆಗರಾದ ಸೀತಾರಾಮ ಆಳ್ವ ಕೊರಿಂಜ ಹಾಗೂ ಪ್ರಭಾಕರ ಗೌಡ ಪೊಸದೋಂಡಿ ಮತ್ತು ತಣ್ಣೀರುಪಂತ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಅಣಾವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಸ್ವಾಗತಿಸಿದರು.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ ಹಾಗೂ ವಿವೇಕ ಕೊಠಡಿ ಉದ್ಘಾಟನೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ

Suddi Udaya

ಬೆದ್ರಬೆಟ್ಟು ನಿವಾಸಿ ಗೋಪಾಲ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಗಮಕ ಕಲಾ ಪರಿಷತ್ ವತಿಯಿಂದ ಪ. ರಾಮಕೃಷ್ಣ ಶಾಸ್ತ್ರಿ ದಂಪತಿಗಳಿಗೆ ಗೌರವಾರ್ಪಣೆ

Suddi Udaya

ನಾರಾವಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!