26.2 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾ.2: ಭಾರತ್ ಬ್ಯಾಂಕ್ ಮುಂಬೈ ಇದರ ಬೆಳ್ತಂಗಡಿ ಕಚೇರಿ ಆರಂಭ: ಕೇಂದ್ರ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕೃತ ಉದ್ಘಾಟನೆ

ಬೆಳ್ತಂಗಡಿ: ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಇದರ ಬೆಳ್ತಂಗಡಿ ಕಚೇರಿಯು ಮಾ.2 ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಇದುವರೆಗೆ ಉಜಿರೆ ಬೆಳಾಲು ತಿರುವು ರಸ್ತೆಯ ಬಳಿ ಇದ್ದ ಕಚೇರಿ ಇದೀಗ ಬೆಳ್ತಂಗಡಿ ನಗರದ ಮುಖ್ಯಭಾಗದಲ್ಲಿರುವ ಶ್ರೀ ಗುರುಸಾನಿಧ್ಯ ವಾಣಿಜ್ಯ ಮಳಿಗೆಯ ನೆಲ ಅಂತಸ್ತಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರ ಸೇವೆಗಾಗಿ ತೆರೆದುಕೊಳ್ಳಲಿದೆ.

ವಿದೇಶಿ ವಿನಿಮಯ ವ್ಯವಹಾರಕ್ಕಾಗಿ ಮೌಲ್ಯಯುತ ಗ್ರಾಹಕರಿಗೆ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಸೇವೆಗಳ ಸಮಗ್ರ ಶ್ರೇಣಿಯನ್ನೂ ಒಳಗೊಂಡಿದೆ. ಈ ಎಲ್ಲ ಕಾರಣಗಳಿಗೋಸ್ಕರ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿAದ ೮೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.


ಭಾರತ್ ಬ್ಯಾಂಕ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮಾದರಿಯಲ್ಲಿ ಡಿಜಿಟಲ್ ಬ್ಯಾಂಕಿಂಗ್ ಪ್ರಯೋಜನಗಳು, ಕೋರ್‌ಬ್ಯಾಂಕಿAಗ್ ಸೌಲಭ್ಯ, ರುಪೇ ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ನೆಟ್‌ಬ್ಯಾಂಕಿಂಗ್ ಸೇವೆಗಳು ಮತ್ತು ಇ-ಸ್ಟೇಟ್‌ಮೆಂಟ್‌ಗಳು ಲಭ್ಯವಿದೆ. ಗ್ರಾಹಕರು ಬಯಸಿದಾಗಲೆಲ್ಲಾ ಐಎಮ್‌ಪಿಎಸ್, ಗೂಗಲ್ ಪೇ- ಪೋನ್ ಪೇ ಇತ್ಯಾದಿಗಳ ಮೂಲಕ ತಕ್ಷಣ ಹಣವನ್ನು ಕಳುಹಿಸಬಹುದು. ಪಿಒಎಸ್ ಟರ್ಮಿನಲ್‌ಗಳು, ಕ್ಯೂಆರ್ ಕೋಡ್ ಪಾವತಿಗಳೂ ಒಳಗೊಂಡಿದ್ದು ನಗದುರಹಿತ ಪಾವತಿಯನ್ನು ಸುಲಭಗೊಳಿಸುತ್ತವೆ.

18000 ಕೋಟಿಗಿಂತ ಹೆಚ್ಚಿನ ವ್ಯವಹಾರ:
ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯು ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿರುವ ಪ್ರಮುಖ ಬಹು ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಹಲವು ದಶಕಗಳಿಂದ ಗ್ರಾಹಕರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮತ್ತು ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಒಟ್ಟು ೧೮,೦೦೦ ಕೋಟಿಗಿಂತ ಹೆಚ್ಚಿನ ವ್ಯವಹಾರದೊಂದಿಗೆ ಭಾರತ್ ಬ್ಯಾಂಕ್ ಬಲವಾದ ಆರ್ಥಿಕ ಅಡಿಪಾಯವನ್ನು ಪ್ರದರ್ಶಿಸುತ್ತದೆ.


ಸರಳೀಕೃತ ಸಾಲ ಪ್ರಕ್ರಿಯೆ ಮತ್ತು ಕಡಿಮೆ ಶುಲ್ಕಗಳು ಗ್ರಾಹಕರ ಮನಗೆದ್ದಿದೆ. ಬ್ಯಾಂಕಿನಲ್ಲಿ ವ್ಯಾಪಾರ ಸಾಲ, ವಸತಿ ಸಾಲ, ಚಿನ್ನದ ಸಾಲ, ಶಿಕ್ಷಣ ಸಾಲ, ವಾಹನ ಸಾಲ ಮತ್ತು ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವ ಇತರ ಹಣಕಾಸು ವ್ಯವಹಾರಗಳು ಲಭ್ಯವಿದೆ.


ಬ್ಯಾಂಕಿನ ಠೇವಣಿದಾರರ ನಿಧಿಯ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಮುಖ್ಯ. ಎಲ್ಲಾ ಪಾಲುದಾರರಿಗೆ ಅಪಾಯ ತಗ್ಗಿಸುವಿಕೆಗೆ ಆದ್ಯತೆ ನೀಡಲಾಗುತ್ತಿದೆ, ಸ್ಥಿರ ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್ ವಾತಾವರಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರಾಗಿ ಸೂರ್ಯಕಾಂತ್ ಜಯ ಸುವರ್ಣ ಅವರ ನೇತೃತ್ವದಲ್ಲಿ, ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ತಜ್ಞರನ್ನು ಒಳಗೊಂಡ ಸಮರ್ಥ ನಿರ್ದೇಶಕರ ಮಂಡಳಿಯು ನಿರ್ವಹಿಸುತ್ತದೆ. ಮಂಡಳಿ, ನಿರ್ವಹಣೆ ಮತ್ತು ಸಿಬ್ಬಂದಿ ಸದಸ್ಯರು ಅದರ ಎಲ್ಲಾ ಪಾಲುದಾರರಿಗೆ ಸುರಕ್ಷಿತ ಮತ್ತು ಸುಭದ್ರ ಬ್ಯಾಂಕಿAಗ್ ಅನುಭವವನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗ್ರಾಹಕರು ಮತ್ತು ಷೇರುದಾರರ ನಂಬಿಕೆ ಮತ್ತು ಬೆಂಬಲವು ಬ್ಯಾಂಕನ್ನು ಯಶಸ್ಸಿನತ್ತ ಮುನ್ನಡೆಸುತ್ತಲೇ ಇದೆ.
ಮಾ.2 ರಂದು ಉಜಿರೆಯಿಂದ ಸ್ಥಳಾಂತರಗೊಳ್ಳುವ ಬೆಳ್ತಂಗಡಿ ಕಚೇರಿಯನ್ನು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಉದ್ಘಾಟಿಸಲಿದ್ದಾರೆ. ಉಪಾಧ್ಯಕ್ಷ ಸೋಮನಾಥ ಬಿ ಅಮೀನ್ ಬ್ಯಾಂಕಿಂಗ್ ವ್ಯವಹಾರಕ್ಕೆ ಚಾಲನೆ ನೀಡಲಿದ್ದಾರೆ. ಆಡಳಿತ ಮಂಡಳಿಯ ನಿರ್ದೇಶಕರು, ಆಹ್ವಾನಿತ ಗ್ರಾಹಕ ಬಂಧುಗಳು ಸಾಕ್ಷಿಯಾಗಲಿದ್ದಾರೆ.

Related posts

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ವೇಣೂರು ವಲಯ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಐತಿಹಾಸಿಕ “ಧರ್ಮಯಾನ” ಶೋಭಾಯಾತ್ರೆ: ಉಜಿರೆ ಉದ್ಯಮಿ ಕೆ. ಮೋಹನ್ ಕುಮಾರ್ ಅವರಿಗೆ “ಶ್ರೀ ಜನಾರ್ಧನ ವಿಭೂಷಣ ಗೌರವ”

Suddi Udaya

ಮೇ 17: ಉಜಿರೆಯಲ್ಲಿ 5ನೇ ವರ್ಷದ ಸಂಭ್ರಮದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ: ಶಾಸಕ ಹರೀಶ್ ಪೂಂಜ

Suddi Udaya

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 8.08 ಲಕ್ಷ ಲಾಭ, ಶೇ. 8 ಡಿವಿಡೆಂಟ್ ಘೋಷಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿ ಪರಿಷ್ಕರಿಸಿ ಆದೇಶ: ಈ ಹಿಂದಿನ ಆದೇಶದಲ್ಲಿದ್ದ ಇಬ್ಬರನ್ನು ಕೈ ಬಿಟ್ಟು ಮತ್ತಿಬ್ಬರ ಸೇರ್ಪಡೆ

Suddi Udaya

ಶಾಸಕ ಹರೀಶ್ ಪೂಂಜರಿಂದ ಕುಂಡದಬೆಟ್ಟು ಸಂತ ಜಾನ್ ಪೌಲ್ ಚರ್ಚ್ ನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Suddi Udaya
error: Content is protected !!