September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

ಬೆಳ್ತಂಗಡಿ: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನದೊಂದಿಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಮಾ.1 ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ವೇಳೆ ದೇವಳದ ವತಿಯಿಂದ ಶಾಲು ಹೊದಿಸಿ ಶಾಸಕರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠ್ಠಲ ಶೆಟ್ಟಿ ಕೊಲ್ಲೊಟ್ಟು, ಅನುವಂಶೀಯ ಆಡಳಿತ ಮೊಕ್ತೇಸರಾದ ಚಿದಾನಂದ ರಾವ್ ಕೊಲ್ಲಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮೇಲಾಂಟ ಮೊಗರೋಡಿ, ಕೋಶಾಧಿಕಾರಿ ರಕ್ಷಿತ್ ಪಣೆಕ್ಕರ, ಪ್ರಚಾರ ಸಮಿತಿ ಸಂಚಾಲಕ ಪ್ರದೀಪ್ ಶೆಟ್ಟಿ ಮಲೆಂಗಲ್ಲು ಮತ್ತಿತರರು ಉಪಸ್ಥಿತರಿದ್ದರು.

Related posts

ಉಜಿರೆ : ಶ್ರೀ ಧ.ಮಂ. ಕಾಲೇಜಿನ ವಿದ್ಯಾರ್ಥಿಗಳಿಂದ ಚುನಾವಣಾ ಜಾಗೃತಿ ಸಪ್ತಾಹದ ಅಂಗವಾಗಿ “ಮತದಾನ ನಮ್ಮ ಹಕ್ಕು” ಬೀದಿ ನಾಟಕ ಪ್ರದರ್ಶನ

Suddi Udaya

ಬೆಳ್ತಂಗಡಿ ನಿರೀಕ್ಷಣಾ ಮಂದಿರ ಲೋಕಾರ್ಪಣೆ

Suddi Udaya

ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100 ಫಲಿತಾಂಶ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಬಾಯಿ ಮತ್ತು ಹಲ್ಲಿನ ಆರೋಗ್ಯದ ಮುಂಜಾಗ್ರತಾ ಕ್ರಮದ ಕುರಿತು ಕಾರ್ಯಾಗಾರ

Suddi Udaya

ಅರಸಿನಮಕ್ಕಿ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಶೀರೂರು ವೇದವರ್ಧನ ಸ್ವಾಮೀಜಿಯವರು ಭೇಟಿ,

Suddi Udaya

ತೆಕ್ಕಾರು : ಸಿಡಿಲು ಬಡಿದು ಮನೆಗೆ ಹಾನಿ

Suddi Udaya
error: Content is protected !!