23.6 C
ಪುತ್ತೂರು, ಬೆಳ್ತಂಗಡಿ
October 24, 2026
Uncategorized

ಉಜಿರೆ ವರ್ತಕರ ಸಂಘದ ನೇತೃತ್ವದಲ್ಲಿ ಉಜಿರೆ ಬ್ರಹ್ಮಕಲಶೋತ್ಸವ ವಾಹನ ಜಾಥಕ್ಕೆ ಚಾಲನೆ – ನೂರಾರು ಸಂಖ್ಯೆಯಲ್ಲಿ ವಾಹನದಲ್ಲಿ ಪಾಲ್ಗೊಂಡ ಭಕ್ತರು, ಪುಂಜಾಲಕಟ್ಟೆ,ಧರ್ಮಸ್ಥಳ,ಉಜಿರೆ ವಾಹನ ಜಾಥ ಮೂಲಕ ಸೇವೆ

ಉಜಿರೆ: ಇತಿಹಾಸ ಪ್ರಸಿದ್ಧ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ, ಉಜಿರೆ ವರ್ತಕರ ಸಂಘದ ನೇತೃತ್ವದಲ್ಲಿ ಪುಂಜಾಲಕಟ್ಟೆಯಿಂದ ವಾಹನ ಜಾಥಕ್ಕೆ,ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾ 1ರಂದು ಚಾಲನೆ ನೀಡಲಾಯಿತು.

ಉಜಿರೆ ವರ್ತಕರು,ಭಕ್ತರು ಸಹಸ್ರಾರು ವಾಹನಗಳೊಂದಿಗೆ ಪುಂಜಾಲಕಟ್ಟೆಯಲ್ಲಿ ಒಟ್ಟು ಸೇರಿ ಪುಂಜಾಲಕಟ್ಟೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ,ಅಲ್ಲಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಲಾಗುವುದು ಎಂದು ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ‌.ಪ್ರತಾಪಸಿಂಹ ನಾಯಕ್ ವಾಹನ ಜಾಥಕ್ಕೆ ಚಾಲನೆ ನೀಡಿದರು.ನೂರಾರು ವರ್ತಕರು ಉಪಸ್ಥಿತರಿದ್ದರು.

Related posts

ಕೊಕ್ಕಡ ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

Suddi Udaya

ಬಳಂಜ: ಜ್ಯೋತಿ ಮಹಿಳಾ ಮಂಡಲದಿಂದ ಸರಕಾರಿ ಶಾಲೆಯಲ್ಲಿ ಊರಿನವರ ಪಾತ್ರ ವಿಷಯದ ಬಗ್ಗೆ ಕಾರ್ಯಾಗಾರ

Suddi Udaya

ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಲಾಯಿಲ ಪಡ್ಲಾಡಿ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡ ಮರ ಕಸ ಕಡ್ಡಿ ತೆರವು: ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ:

Suddi Udaya

ಬೆಳ್ತಂಗಡಿ: ದ.ಕ.ಜಿ.ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಭೇಟಿ

Suddi Udaya
error: Content is protected !!