September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅನುಮತಿ ದೊರಕಿರುವ ಬಗ್ಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಿಂದ ಸ್ಪಷ್ಟೀಕರಣ

ಗುರುವಾಯನಕರೆ: ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ನ ಆಡಳಿತದಲ್ಲಿ ನಡೆಯುತ್ತಿರುವ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಪ್ರಿ ಪ್ರೈಮರಿಯಿಂದ ಹತ್ತನೆಯ ತರಗತಿಯವರೆಗೆ ದಾಖಲಾತಿ ಮಾಡಿ – ತರಗತಿ ನಡೆಸಲು ಸರಕಾರದ ಅನುಮತಿ ಹೊಂದಿದ್ದು, ಸದ್ರಿ ಶಾಲೆಯು ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ಸ್ಥಾಪಿತವಾಗಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ.

ಈ ಕಟ್ಟಡಕ್ಕೆ ಸರಕಾರದ ಎಲ್ಲಾ ಇಲಾಖೆಗಳ ಅಗತ್ಯ ಅನುಮತಿ ಲಭ್ಯವಾಗಿದೆ.ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ನಿಯಮಾನುಸಾರ ಅಗ್ನಿ ಸುರಕ್ಷತೆಯ ಎಲ್ಲಾ ಉಪಕರಣಗಳನ್ನು ಅಳವಡಿಸಿ, ಅಧಿಕಾರಿಗಳ ಪರಿವೀಕ್ಷಣೆ ನಡೆದು, ದಿನಾಂಕ 25/07/2025 ರಂದು ಸಮಾಪನ ಪತ್ರ ( ಸಂ. ಜಿಬಿಸಿ.(2)918/2025 E – Office Com No.59264)
ದೊರಕಿರುತ್ತದೆ.

ಈ ಕುರಿತಾದ ಯಾವುದೇ ಗಾಳಿ ಸುದ್ದಿಗಳಿಗೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಹೆತ್ತವರು ವಿಚಲಿತರಾಗಬಾರದು. ಎಕ್ಸೆಲ್ ವಿದ್ಯಾ ಸಂಸ್ಥೆಗಳಲ್ಲಿ ಯಾವತ್ತೂ ವಿದ್ಯಾರ್ಥಿಗಳ ಕ್ಷೇಮಪಾಲನೆಗೆ ಹಾಗೂ ಇಲಾಖಾ ನಿಯಮಗಳಿಗೆ ಅಗ್ರ ಪ್ರಾಶಸ್ತ್ಯ ನೀಡಲಾಗುತ್ತದೆ ಎನ್ನುವುದನ್ನು ಸಾರ್ವಜನಿಕರು ಮನಗಾಣಬೇಕೆಂದು
ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಎ.13ರ ಒಳಗೆ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸಲು ಸೂಚನೆ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯ ಪ್ರತಿಭಾ ದಿನಾಚರಣೆಯ ಅಂಗವಾಗಿ ಬಹುಮಾನ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಯಕ್ಷಗಾನ ಕಲಾವಿದ ವಸಂತ ಗೌಡ ಅವರಿಗೆ ಯಕ್ಷಭಾರತಿಯಿಂದ ಗೌರವ ಸನ್ಮಾನ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿ ದಸರಾ- ದೀಪಾವಳಿ ಪ್ರಯುಕ್ತ ಉಡುಪುಗಳ ಮಹಾಮೇಳ

Suddi Udaya
error: Content is protected !!