September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಿಯೋನ್ ಆಶ್ರಮ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಗಂಡಿಬಾಗಿಲು ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.8ರಂದು ಆಚರಿಸಲಾಯಿತು.

ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಸಿ. ಪೌಲೋಸ್ ಹಾಗೂ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ. ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕೇಕ್ ಕತ್ತರಿಸಿ ಮಹಿಳೆಯರ ಗೌರವವನ್ನು ಸ್ಮರಿಸಲಾಯಿತು ಹಾಗೂ ಎಲ್ಲರಿಗೂ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಸಿ. ಪೌಲೋಸ್ ಮಾತನಾಡಿ, “ಮಹಿಳೆಯರು ಕುಟುಂಬದ ಬೆನ್ನೆಲುಬು ಮಾತ್ರವಲ್ಲ, ಸಮಾಜದ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಾರೆ. ತಾಯಿ, ಸಹೋದರಿ, ಗುರು ಮತ್ತು ಸೇವಾ ಮನೋಭಾವದ ಪ್ರತಿರೂಪವಾಗಿ ಮಹಿಳೆಯರು ಸಮಾಜವನ್ನು ಬೆಳಗಿಸುತ್ತಿದ್ದಾರೆ. ಮಹಿಳೆಯರ ಗೌರವ, ಸಮಾನತೆ ಮತ್ತು ಸಬಲೀಕರಣವು ಸಮಾಜದ ಪ್ರಗತಿಗೆ ಅತ್ಯಂತ ಅಗತ್ಯವಾಗಿದೆ” ಎಂದು ತಿಳಿಸಿದರು.

ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು, ಆಶ್ರಮ ನಿವಾಸಿಗಳು ಹಾಗೂ ಸಂದರ್ಶಕರಾಗಿ ಆಗಮಿಸಿದ ಸೈಂಟ್ ಲಾರೆನ್ಸ್ ಚರ್ಚ್ ಬೋಂದೆಲ್ ಇಲ್ಲಿನ ಸೈಂಟ್ ಸೆಬಾಸ್ಟಿನ್ ವಾರ್ಡ್ ನ ಸದಸ್ಯರು ಉಪಸ್ಥಿತರಿದ್ದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

Suddi Udaya

ಕೊಕ್ಕಡ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮಲವಂತಿಗೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!