ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ “ಆಳ್ವಾಸ್ ಸಾಂಸ್ಕೃತಿಕ ವೈಭವ

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಮಾ 22ರಂದು ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ “ಆಳ್ವಾಸ್ ಸಾಂಸ್ಕೃತಿಕ ವೈಭವ” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಾಂಸ್ಕೃತಿಕ ವೈಭವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಉದ್ಘಾಟಿಸಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ,ಉದ್ಯಮಿ ಶಶಿಧರ ಶೆಟ್ಟಿ ಬರೋಡ,ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡುವೆಟ್ನಾಯ ಶುಭಹಾರೈಸಿದರು.

ವೇದಿಕೆಯಲ್ಲಿ ವಿ.ಪ.ಶಾಸಕ ಪ್ರತಾಪ ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್., ಅನಿಲ್ ಕುಮಾರ್ ಎಸ್. ಎಸ್., ಪೂರನ್ ವರ್ಮ, ಕೆ. ಮೋಹನ್ ಕುಮಾರ್,ಡಾ.ಎಂ.ಪಿ. ಶ್ರೀನಾಥ್, ಡಾ. ಹರ್ಷ ಸಂಪಿಗೆತ್ತಾಯ,ಮಚ್ಚಿಮಲೆ ಅನಂತ ಭಟ್, ವಸಂತ ಶೆಟ್ಟಿ ಶ್ರದ್ಧಾ,ರವೀಂದ್ರ ಶೆಟ್ಟಿ ಸುರಭಿ, ರಾಜೇಶ್ ಪ್ರೈ, ಡಾ. ಪ್ರದೀಪ್ ಆಟಿಕುಕ್ಕೆ, ಅರವಿಂದ ಕಾರಂತ್, ಶ್ರೇಯಾ ಶೆಟ್ಟಿ,ಉಮೇಶ್ ಶೆಟ್ಟಿ, ಅಶ್ವಿನಿ ಎ. ಹೆಬ್ಬಾರ್, ಪ್ರಕಾಶ ನಾರಾಯಣ ರಾವ್, ಡಾ!ಕುಮಾರ ಹೆಗ್ಡೆ ಪುಷ್ಪರಾಜ ಶೆಟ್ಟಿ ,ಬಿ.ಕೆ.ಧನಂಜಯ ರಾವ್,ಪ್ರಸಾದ್ ಬಿ.ಎಸ್,ಚಿದಾನಂದ ಇಡ್ಯ,ಗಣೇಶ್ ಗೌಡ,ಜಿತೇಶ್ ಜೈನ್, ಸೇರಿದಂತೆ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.

ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಅಂಬರೀಶ ಚಿಪಳೂಲ್ಕರ್ ಕಾರ್ಯಕ್ರಮ ಸಂಘಟಿಸಿದರು. ಉಜಿರೆ ರಥಬೀದಿಯಲ್ಲಿ ಆಯೋಜಿಸಿದ ಬೃಹತ್ ವೇದಿಕೆಯಲ್ಲಿ 3 ಗಂಟೆ ಕಾಲ ನಡೆದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹಸ್ರಾರು ಕಲಾಭಿಮಾನಿಗಳು ಹೃದ್ಯವಾಗಿ ಆಸ್ವಾದಿಸಿದರು.

Related posts

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕರಿಗೆ “ಆಕ್ಸ್ಫರ್ಡ್ ಅಡ್ವಾಂಟೇಜ್ ಪೆಡಗೋಜಿ” ಕಾರ್ಯಾಗಾರ

Suddi Udaya

ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀರಾಮ ಕ್ಷೇತ್ರ, ಕಾಜೂರು ದಗಾ೯ಕ್ಕೆ ಭೇಟಿ

Suddi Udaya

ಶಿಶಿಲ ಗ್ರಾಮ ಪಂಚಾಯತ್‌ ಗ್ರಾಮ ಸಭೆ

Suddi Udaya

ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ

Suddi Udaya

ಉಜಿರೆ ಜನಾರ್ದನ ದೇವಸ್ಥಾನದ ನೂತನ ವಿಜಯಗೋಪುರ ಲೋಕಾರ್ಪಣೆ

Suddi Udaya

ಊರಿನ ಜನರ ಸುರಕ್ಷತೆಗೆ ಮೊದಲ ಆದ್ಯತೆ” – ಚಿರತೆ ಪ್ರತ್ಯಕ್ಷದ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ ತೆಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್

Suddi Udaya
error: Content is protected !!