September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉರುವಾಲು: ಕಾರಿಂಜ ಬಾಯ್ತಾರು ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯ ಸಮವಸ್ತ್ರ ವಿತರಣೆ

ಉರುವಾಲು: ಉರುವಾಲು ಗ್ರಾಮದ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಬಾಯ್ತಾರು ಇಲ್ಲಿಯ ಭಜನಾ ಮಂಡಳಿಯ ವಿದ್ಯಾರ್ಥಿಗಳ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯ ಗೌರವ ಸಲಹೆಗಾರ ಡೀಕಯ್ಯ ಸಿ ತೇಜಸ್ವಿ ಆನಡ್ಕ ದೀಪ ಬೆಳಗಿಸಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ವಿದ್ಯಾರ್ಥಿಗಳು ಭಜನೆಗೆ ಬರುವಾಗ ಶಿಸ್ತು, ನಿಯಮ, ಸಮಯ ಪಾಲನೆಯನ್ನು ಮಾಡಬೇಕು. ಭಜನೆಯಿಂದ ಇನ್ನಷ್ಟು ಶಕ್ತಿ ಉತ್ತಮವಾದ ಸಂಸ್ಕೃತಿ, ಸಂಸ್ಕಾರ, ಕೂಡ ವಿದ್ಯಾರ್ಥಿಗಳಲ್ಲಿ ಬರುತ್ತದೆ ಎಂದು ತಿಳಿಸಿದರು.

ಈ‌‌ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ನೀನಿ, ಉಪಾಧ್ಯಕ್ಷ ಓಬಯ್ಯ ಪೂಜಾರಿ ಕಾರಿಂಜ, ಸದಸ್ಯರಾದ ವಸಂತ ಸಾಲ್ಯಾನ್ ಆನಡ್ಕ, ರಾಮಣ್ಣ ಗೌಡ ನೀನಿ, ಜಗನ್ನಾಥ ರೈ ನೀನಿ, ರಾಮಣ್ಣ ನಾಯ್ಕ ನೀನಿ, ವಸಂತ ಗೌಡ ಅಲೈಮಾರು, ಮಹೇಶ್ ಅಡೆಂಕಿಲಪಳಿಕೆ, ಪ್ರದೀಪ್ ನಾಯ್ಕ ಆನಡ್ಕ,ಯಶ್ವಿತ್ ರೈ ನೀನಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್ ಕುಮಾರ್ ಸ್ವಾಗತಿಸಿ ವಂದಿಸಿದರು.

Related posts

ಮಾ.13-17: ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ಎಸ್.ಡಿ.ಎಂ ವಸತಿ ಪಪೂ ಕಾಲೇಜಿನ ಪ್ರವೇಶೋತ್ಸವ ಸಮಾರಂಭ

Suddi Udaya

ಮರದಿಂದ ಬಿದ್ದು ಸಾವು

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ಬೆಳ್ತಂಗಡಿ ತುಳುನಾಡು ಕೋಳಿ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ: ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಉಚ್ಚೂರು, ಪ್ರ.ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು

Suddi Udaya
error: Content is protected !!