September 6, 2026
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಎ.16: ವಿವಿಧ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆ


ಬೆಳ್ತಂಗಡಿ: ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರಕ್ಕೆ ಅಳವಡಿಸಿರುವ 33 ಕೆವಿ ಭೂಗತ ಕೇಬಲನ್ನು ಚೇತನಗೊಳಿಸುವ ಕಾಮಗಾರಿ, ಹೊಸ 11ಕೆವಿ ಲಿಂಕ್ ಲೈನಿನ ಕಾಮಗಾರಿ, ರಸ್ತೆ ಅಗಲೀಕರಣ ಸಂಬಂಧ ರಸ್ತೆ ಬದಿಯಲ್ಲಿರುವ ಕಂಬಗಳ ಸ್ಥಳಾಂತರ ಕಾಮಗಾರಿ ಹಾಗೂ ವಿದ್ಯುತ್ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಕೊಲ್ಲಿ, ಬಂಗಾಡಿ, ಕೊಯ್ಯೂರು, ಉಜಿರೆ, ಬೆಳಾಲು, ಲ್ಯಾಲ, ಕುವೆಟ್ಟು, ಗೇರುಕಟ್ಟೆ, ಮಡಂತ್ಯಾರು, ಬಳ್ಳಮಂಜ ಫೀಡರುಗಳಲ್ಲಿ ಹಾಗೂ ಧರ್ಮಸ್ಥಳ ೩೩/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಧಮಸ್ಥಳ ಟೆಂಪಲ್, ಕನ್ಯಾಡಿ, ಪುದುವೆಟ್ಟು, ಅರಸಿನಮಕ್ಕಿ, ನಿಷ್ಠೆ, ಪಟ್ರಮೆ ಫೀಡರುಗಳಲ್ಲಿ ಎ.೧೬ರಂದು ಗುರುವಾರದಂದು ಬೆಳಿಗ್ಗೆ ೧೦ ರಿಂದ ಸಂಜೆ ೫.೩೦ರ ತನಕ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಮುಂಡಾಜೆ ಕಾಲೇಜು ಎನ್‌ಎಸ್‌ಎಸ್ ಶಿಬಿರ ಉದ್ಘಾಟನೆ

Suddi Udaya

ಸಾರ್ವಜನಿಕ ರಸ್ತೆಯ ದುರ್ಬಳಕೆ ವಿರುದ್ಧ ಎಸ್.ಡಿ.ಪಿ.ಐ. ದೂರು

Suddi Udaya

ಅ. 25: ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

Suddi Udaya

ಎ.25: ಮರೋಡಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಮೃತ್ಯುಂಜಯ ಹೋಮ

Suddi Udaya

ಶಾಸಕ ಹರೀಶ್ ಪೂಂಜರಿಂದ ಬಳಂಜ ಶಾಲಾ ಎಲ್.ಕೆ.ಜಿ ಕೊಠಡಿ ಉದ್ಘಾಟನೆ ಮತ್ತು ಅಶ್ವಥ್ ಹೆಗ್ಡೆ ಫೌಂಡೇಶನ್ ನಿಂದ ಶಾಲಾ ವಾಹನ ಸಮರ್ಪಣೆ

Suddi Udaya

ಹೃದಯಾಘಾತಕ್ಕೊಳಗಾದ ವ್ಯಕ್ತಿಯೊರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿ ಅಪಾಯದಿಂದ ಪಾರು ಮಾಡಿದ ಆಸ್ಪತ್ರೆಯ ಸಿಬ್ಬಂದಿ: ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ರವರ ಕಾರ್ಯಕ್ಕೆ ವ್ಯಾಪಕ ಪ್ರಸಂಸೆ

Suddi Udaya
error: Content is protected !!