September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಯುವವಾಹಿನಿಯ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಲೀಲಾವತಿ ಪಣಕಜೆ, ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಿ.ಕೆ.

ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕದ ವಾರ್ಷಿಕ ಮಹಾಸಭೆಯು ಎ.16ರಂದು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವಹಿಸಿದ್ದರು. ಘಟಕದ ಪ್ರಧಾನ ಕಾರ್ಯದರ್ಶಿ ಮಧುರ ರಾಘವ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ನಾಗೇಶ್ ಅದೇಲು ಇವರು ವಾರ್ಷಿಕ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಘಟಕದ ನಿಕಟಪೂರ್ವ ಅಧ್ಯಕ್ಷರು ಚುನಾವಣಾಧಿಕಾರಿ ಸದಾಶಿವ ಪೂಜಾರಿ ಊರ 2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ನೂತನ ಅಧ್ಯಕ್ಷರಾಗಿ ಲೀಲಾವತಿ ಪಣಕಜೆ, ಉಪಾಧ್ಯಕ್ಷರಾಗಿ ಸುನಿಲ್ ಕನ್ಯಾಡಿ, ನಾಗೇಶ್ ಅದೇಲು, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಿ.ಕೆ., ಜೊತೆ ಕಾರ್ಯದರ್ಶಿಯಾಗಿ ಆಕಾಶ್ ಗೇರುಕಟ್ಟೆ, ಕೋಶಾಧಿಕಾರಿಯಾಗಿ ಸುದೀಪ್ ಸಾಲಿಯಾನ್ ಸವಣಾಲು ಆಯ್ಕೆಯಾದರು. ಘಟಕದ ವಿವಿಧ ಸಮಿತಿಗಳಿಗೆ ನಿರ್ದೇಶಕರುಗಳನ್ನು ಹಾಗೂ ಸಂಘಟನಾ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳಾದ ಎಂ.ಕೆ ಪ್ರಸಾದ್, ಸುಜಾತ ಅಣ್ಣಿ ಪೂಜಾರಿ, ಅಶ್ವಥ್ ಕುಮಾರ್ ಹಾಗೂ ಘಟಕದ ಪದಾಧಿಕಾರಿಗಳು ಸಲಹೆಗಾರರು ಉಪಸ್ಥಿತರಿದ್ದರು.

Related posts

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Suddi Udaya

ಡಿ.6: ಲಾಯಿಲ ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಪ್ರಶ್ನಾಚಿಂತನೆ

Suddi Udaya

ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ ಶ್ರದ್ಧಾಂಜಲಿ

Suddi Udaya

ಮೇ 20,21: ಸಿಇಟಿ ಪರೀಕ್ಷೆ

Suddi Udaya

ಮಡಂತ್ಯಾರು: ರಬ್ಬರ್ ಮರ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ‌

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya
error: Content is protected !!