September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಏ.23-24: ಇಚ್ಚಿಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ-ಗುರುಮಂದಿರ ಲೋಕಾರ್ಪಣೆ

ಉಜಿರೆ: ಶ್ರೀ ಗುರುನಾರಾಯಣ ಮಂದಿರ ಸೇವಾ ಸಮಿತಿ ಶಿವಗಿರಿ ಇಚ್ಚಿಲ ಉಜಿರೆ, ಶ್ರೀ ಗುರುನಾರಾಯಣ ಸೇವಾ ಸಂಘ ಉಜಿರೆ ಇದರ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ, ಕಲಶಾಭಿಷೇಕ,ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ ಹಾಗೂ ಶ್ರೀ ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಏ.24ರಂದು ಜರುಗಲಿದೆ ಎಂದು ಶ್ರೀ ಗುರುನಾರಾಯಣ ಮಂದಿರ ಸೇವಾ ಸಮಿತಿ ಶಿವಗಿರಿ ಉಜಿರೆ ಇದರ ಅಧ್ಯಕ್ಷ ರವಿಕುಮಾರ್ ಬರಮೇಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.23ರಂದು ಸಂಜೆ ತಂತ್ರಿವರ್ಯರು ಶ್ರೀ ಕೃಷ್ಣ ಗುರೂಜಿ ಧರ್ಮದರ್ಶಿಗಳು ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಮಾಣಿಲ ಕುಕ್ಕಾಜೆ ಇವರ ಆಗಮನ ಪೂರ್ಣ ಕುಂಭ ಸ್ಚಾಗತ, ಆಚಾರ್ಯವರಣ ಸಾಮೂಹಿಕ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಪ್ರಸಾದ ಶುಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ರಾತ್ರಿ ಅನ್ನಸಂತರ್ಪಣೆ ನಡೆಯುವುದು.

ಏ.24ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಗುರುನಾರಾಯಣ ಸ್ವಾಮಿಯ ಪೀಠ ಪ್ರತಿಷ್ಠೆ, ಕಲಶಾಭಿಷೇಕ ಶ್ರಿ ನಾರಾಯಣ ಗುರುಗಳ ಛಾಯಚಿತ್ರ ಪ್ರತಿಷ್ಠೆ ಹಾಗೂ ಗುರುಮಂದಿರ ಉದ್ಘಾಟನೆ, ಗುರುಪೂಜೆ, ಸತ್ಯನಾರಾಯಣ ಪೂಜೆ, ವಿವಿಧ ತಂಡಗಳಿಂದ ಭಜನೆನ ಮಧ್ಯಾಹ್ನ ಅನ್ನಸಂತರ್ಪಣೆ ಜರಗುವುದು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ನಾರಾಯಣ ಸ್ವಾಮಿ ಭೇಟಿ

Suddi Udaya

ಕರಾಟೆ ಸ್ಪರ್ಧೆ: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕಾರ್ಮೆಲ್ ಸಜಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ: ಬೋಂಟ್ರೊಟ್ಟುಗುತ್ತು ದೈವಸ್ಥಾನ ಕ್ಷೇತ್ರದಲ್ಲಿ ಚಾವಡಿಯಲ್ಲಿ ದೈವಗಳ ಪ್ರತಿಷ್ಠೆ ,ಕಲಶಾಭಿಷೇಕ: ಸಂಜೆ ಬಳಂಜದಿಂದ ಬೊಂಟ್ರೋಟ್ಟು ಕ್ಷೇತ್ರಕ್ಕೆ ಹಸಿರುವಾಣಿ ಮೆರವಣಿಗೆ

Suddi Udaya

ತೆಕ್ಕಾರು : ಇಸ್ಮಾಯಿಲ್ ಮೇಲವ ನಿಧನ

Suddi Udaya

ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ಕಾವ್ಯ ವಾಚನ – ಪ್ರವಚನ ಉದ್ಘಾಟನೆ

Suddi Udaya

ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆ ಇದರ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಹಾಗೂ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!