27.5 C
ಪುತ್ತೂರು, ಬೆಳ್ತಂಗಡಿ
April 25, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗರ್ಡಾಡಿ: ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ-ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ :ನ್ಯಾಯಾಲಯದಲ್ಲಿರುವ ಜಾಗದ ವಿವಾದ ಸಂಬಂಧ ಅಕ್ರಮವಾಗಿ ಆ ಜಾಗಕ್ಕೆ ಪ್ರವೇಶ ಮಾಡಿ ಸಿಸಿಕ್ಯಾಮರಗಳಿಗೆ ,ಡಿವಿಆರ್ ಸೇರಿದಂತೆ ಇತರ ವಸ್ತುಗಳಿಗೆ ಹಾನಿ ಮಾಡಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎ.24 ರಂದು ಆರೋಪಿಗಳಾದ ಶಾಂತಲಾ ಪ್ರಭು, ಮನೋಹರ್, ಬೆಳ್ತಂಗಡಿಯ ವಕೀಲೆ ಟಿಸ್ಮಿ ವಿರುದ್ಧ BNS-2023 (u/s-189(2),191(2),54,115(2),329,329(4),127,324(4),303(2),351(2),290) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ದೂರಿನ ಸಾರಾಂಶ: ನಾನೂ ಹಾಗೂ ನನ್ನ ಕುಟುಂಬದೊಂದಿಗೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಡುಕೊಡಿ ನಿವಾಸದ ವಿಳಾಸದಲ್ಲಿ ವಾಸವಿರುತ್ತೇನೆ. ಎ.24 ರಂದು ಸುಮಾರು ಮಧ್ಯಾಹ್ನ 1:30 ಕ್ಕೆ ಎದುರುದಾರರ ಪೈಕಿ ಮನೋಹರ ಹಾಗೂ ಸುಮಾರು 25 ಮಂದಿ ಯುವಕರ ತಂಡದೊಂದಿಗೆ ನನ್ನ ಪಟ್ಟ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಜಾಗಕ್ಕೆ ಹಾಕಿದ್ದ ಗೇಟನ್ನು ಮುರಿದು, ನನ್ನ ಜಮೀನಿಗೆ ನುಗ್ಗಿ ಗೇಟಿಗೆ ಆಳವಡಿಸಿದ 6 ಸಿ.ಸಿ ಕ್ಯಾಮರಾವನ್ನು ಮತ್ತು ಡಿ.ವಿ.ಆರ್ ನ್ನು ನಾಶ ಪಡಿಸಿ, ಮೆಮೊರಿಕಾರ್ಡ್ ನ್ನು ಕದ್ದುಕೊಂಡು ಹೋಗಿರುತ್ತಾರೆ. ಈ ಸಮಯದಲ್ಲಿ ನನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಣು ಹಾಗೂ ರಾಮು ಎಂಬವರಿಗೆ ಮನೋಹರ ಹಾಗೂ ಇತರರು ಕೈಯಿಂದ ಹಲ್ಲೆಯನ್ನು ಮಾಡಿರುತ್ತಾರೆ. ನಾನು ಮನೆಯಲ್ಲಿ ಇದ್ದ ಸಂದರ್ಭ ನನ್ನ ಮನೆಗೂ ಕೂಡ ಅತಿಕ್ರಮ ಪ್ರವೇಶಿಸಿ ನನಗೂ ಹಲ್ಲೆ ಮಾಡಿರುತ್ತಾರೆ. ನಾನು ತಪ್ಪಿಸಿಕೊಂಡು ಮನೆಯೊಳಗಡೆ ಓಡಿರುತ್ತೇನೆ. ಬಳಿಕ ನನ್ನ ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿರುತ್ತಾರೆ. ಆ ಸಂದರ್ಭದಲ್ಲಿ ನಾನು ಬೊಬ್ಬೆ ಹಾಕಿದಾಗ ನೀವು ಕೂಡಲೇ ಜಾಗವನ್ನು ಖಾಲಿ ಮಾಡಬೇಕೆಂದು ಬೆದರಿಕೆಯನ್ನು ಹಾಕಿರುತ್ತಾರೆ. ಒಂದು ವೇಳೆ ನೀವು ಜಾಗವನ್ನು ಖಾಲಿ ಮಾಡದೇ ಇದ್ದಲ್ಲಿ ನಿಮ್ಮನ್ನು ಸುಮ್ಮನೆ ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ.

ಈ ಬಗ್ಗೆ ಸ್ಥಳೀಯರು ಹಾಗೂ ನಾನು ಎದುರುದಾರರನ್ನು ವಿಚಾರಿಸಿದಾಗ ನನ್ನ ಹಕ್ಕಿನ ಜಾಗದ ಬಗ್ಗೆ ಶಾಂತಲಾ ಪ್ರಭು ರವರು ಮನೋಹರವರಿಗೆ ಅಕ್ರಮವಾಗಿ ಲೀಸ್ ಮಾಡಿಕೊಟ್ಟಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.ಆದರೆ ಸದ್ರಿ ಜಮೀನುಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೂಡಾ ಪ್ರಕರಣದ ವಿಚಾರಣೆಯಾಗಿರುತ್ತಿದ್ದು, ನಮ್ಮ ಸ್ವಾಧೀನದಲ್ಲಿ ಇರುತ್ತದೆ. ಸದ್ರಿ ಜಮೀನಿನ ಪಹಣಿಗಳು ಶಾಂತಲಾ ಪ್ರಭು ಹೆಸರಿನಲ್ಲಿದ್ದರೂ ಆ ಜಮೀನುಗಳು ನಮ್ಮ ಸ್ವಾಧೀನತೆಯಲ್ಲಿರುವ ಬಗ್ಗೆ ನ್ಯಾಯಾಲಯವು ಪುರಸ್ಕರಿಸಿರುತ್ತದೆ.ಸದ್ರಿ ಮನೋಹರನ ಜೊತೆ ವಕೀಲರಾದ ಶ್ರೀಮತಿ ಟಿಸ್ಮಿಯವರು ನಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಆತನಿಗೆ ಈ ಕೃತ್ಯ ನಡೆಸುವಂತೆ ಪ್ರೇರಣೆಯನ್ನು ನೀಡಿರುತ್ತಾರೆ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಹಿಂದೆ 2023ರಲ್ಲಿ ಶಾಂತಲಾ ಪ್ರಭುರವರು ನನ್ನ ಹಾಗೂ ಕುಟುಂಬದವರಿಂದ ಅಕ್ರಮವಾಗಿ ಕ್ರಯ ಚೀಟನ್ನು ಬರೆಸಿಕೊಂಡು ಯಾವುದೇ ಪ್ರತಿಫಲವನ್ನು ನೀಡಿರುವುದಿಲ್ಲ. ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಓ.ಎಸ್. 1/2024 ಪ್ರಕರಣವನ್ನು ದಾಖಲಿಸಿದ್ದು ಶಾಂತಲಾ ಪ್ರಭು ಹಾಗೂ ಅವರ ಯಾವುದೇ ಪ್ರತಿನಿಧಿಗಳು ನನ್ನ ಜಮೀನಿಗೆ ಪ್ರವೇಶಿಸದಂತೆ ಮತ್ತು ನಮ್ಮ ಸ್ವಾಧೀನಕ್ಕೆ ತೊಂದರೆ ಮಾಡದಂತೆ ನ್ಯಾಯಾಲಯವು ಸದ್ರಿ ಪ್ರಕರಣದ ಅಂತಿಮ ಆದೇಶದ ವರೆಗೆ ತಡೆಯಾಜ್ಞೆ ನೀಡಿರುತ್ತದೆ.ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸದ್ರಿ ತಡೆಯಾಜ್ಞೆಯು ಪುರಸ್ಕೃತಗೊಂಡಿರುತ್ತದೆ. ಅದಾಗಿಯು ಎದುರುದಾರರು ಶಾಂತಲಾ ಪ್ರಭು ಹಾಗೂ ಅವರ ಗಂಡ ರಾಜೇಶ್ ಪ್ರಭು ರವದ ಕುಮ್ಮಕ್ಕಿನಿಂದ ನನ್ನ ಜಮೀನಿಗೆ ಅತಿಕ್ರಮವಾಗಿ ಪ್ರವೇಶಿಸಿರುವುದು ನ್ಯಾಯಾಲಯದ ಅದೇಶದ ಉಲ್ಲಂಘನೆಯಾಗಿರುತ್ತದೆ. ಅದೇ ರೀತಿ ನಮ್ಮ ಮನೆಗೆ ಅತಿಕ್ರಮ ಪ್ರವೇಶಿಸಿ ಸ್ವತ್ತುಗಳನ್ನು ನಾಶಮಾಡಿ. ನನ್ನ ಕೆಲಸದವರ ಮೇಲೆ ಹಲ್ಲೆ ಮಾಡಿ. ಹೋಗಿರುವುದು ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಈ ಕೃತ್ಯದಿಂದ ನಮಗೆ ಸುಮಾರು 80 ಸಾವಿರದಷ್ಟು ನಷ್ಟವಾಗಿರುತ್ತದೆ ಈ ಬಗ್ಗೆ ತುರ್ತು ಪೊಲೀಸ್ ಸಹಾಯವಾಣಿ 112 ಕರೆಮಾಡಿದ್ದು ಸ್ಥಳಕ್ಕೆ 112 ಪೊಲೀಸ್ ನವರು ಬಂದು ಈ ಬಗ್ಗೆ ಠಾಣೆಗೆ ಹೋಗಿ ದೂರು ಸಲ್ಲಿಸುವಂತೆ ತಿಳಿಸಿರುತ್ತಾರೆ.ಆದ್ದರಿಂದ ಎದುರುದಾರರ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ, ಎದುರುದಾರರು ಮತ್ತೊಮ್ಮೆ ನನ್ನ ಜಮೀನಿಗೆ ಪ್ರವೇಶಿಸಿ ಸ್ವತ್ತುಗಳನ್ನು ನಾಶಪಡಿಸುವ ಹಾಗೂ ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಯಿದ್ದು ನನಗೆ ಹಾಗೂ ನನ್ನ ಕುಟುಂಬಕ್ಕೆ ಮತ್ತು ನನ್ನ ಕೆಲಸಗಾರರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕಾಗಿ ದೂರುದಾರ ಗೋಪ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಉಜಿರೆ ರುಡ್ ಸೆಟ್ ಸಂಸ್ಥೆಗೆ ಭೇಟಿ

Suddi Udaya

ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ಮರು ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸ್ಥಳಕ್ಕೆ ಪುತ್ತೂರು ಮಾಸ್ಟರ್ ಪ್ಲಾನರಿಯವರಿಂದ ಭೇಟಿ

Suddi Udaya

ಹೊಸಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದು ಆತ್ಮಹತ್ಯೆ

Suddi Udaya

ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ ಬಳಂಜ ಗ್ರಾಮ ಪಂಚಾಯತ್ ಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಂದ ಪ್ರಶಸ್ತಿ ಪ್ರದಾನ

Suddi Udaya

ಪ್ರತಿಯೊರ್ವರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡುವ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ ಸಂಸ್ಥೆಗೆ 35 ಸಂಭ್ರಮ

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!