30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಬೆಳ್ತಂಗಡಿವರದಿ

ಮೇ 17: ಶಾಸಕ ಹರೀಶ್ ಪೂಂಜರ ಸಹಕಾರದಲ್ಲಿ ಉಜಿರೆಯಲ್ಲಿ ಸಂಭ್ರಮದ ಕೇರಳ ಸಾಂಪ್ರದಾಯಿಕ “ವಿಷುಕಣಿ” ಆಚರಣೆ:ಕೇರಳದ ಸಾಂಪ್ರದಾಯಿಕ ಶೈಲಿಯ ಊಟೋಪಚಾರ,ಕೇರಳ ಚೆಂಡೆ ಪ್ರದರ್ಶನ,ಪೂಕಳಂ, ಅಂತರರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ

ಬೆಳ್ತಂಗಡಿ :ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ 5ನೇ ವರ್ಷದ ವಿಷುಕಣಿ 5.0 ಕಾರ್ಯಕ್ರಮವು ಮೇ 17, ರವಿವಾರ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ವಿಷುಕಣಿ ಸಮಾರಂಭದ ಪೂರ್ವಭಾವಿ ಸಭೆಯು ಶಾಸಕರಾದ ಹರೀಶ್ ಪೂಂಜರವರ ನೇತೃತ್ವದಲ್ಲಿ,ಸಮಿತಿ ಪ್ರಮುಖರ ಮುಂದಾಳತ್ವದಲ್ಲಿ ಗುರುವಾಯನಕೆರೆ ಹವ್ಯಕ ಸಭಾಭವನದಲ್ಲಿ ನೇ 2ರಂದು ನಡೆಯಿತು. ವಿಶೇಷವಾಗಿ ವಿಷುಕಣಿ ಆಚರಣೆಯನ್ನು ಕಳೆದ ಐದು ವರ್ಷಗಳಿಂದ ಅತ್ಯಂತ ಅಚ್ಚುಕಟ್ಟಾಗಿ ಆಚರಿಸುತ್ತಿದ್ದು ಈ ಬಾರಿಯು ಸಂತೋಷ ,ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.

ಶಾಸಕ ಹರೀಶ್ ಪೂಂಜರವರ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೇರಳದ ಸಾಂಪ್ರದಾಯಿಕ ಶೈಲಿಯ 32 ಬಗೆಯ ಊಟೋಪಚಾರ,ಕೇರಳ ಚೆಂಡೆ ಪ್ರದರ್ಶನ,ಪೂಕಳಂ, ಅಂತರರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಉಜಿರೆ ರಮ್ಯ ಫ್ಯಾನ್ಸಿ ಮಾಲಕ ಪ್ರಸಾದ್ ಬಿ.ಎಸ್, ಅಕ್ಷರ ಪ್ರಿಂಟರ್ಸ್ ಮಾಲಕ ಅನಿಲ್ ಕುಮಾರ್ ಶಿಬಾಜೆ,ಉದ್ಯಮಿ ಬಾಲಕೃಷ್ಣ ನೈಮಿಷ,ಉದ್ಯಮಿ ದಿವಿನೇಶ್ ಚಾರ್ಮಾಡಿ ಹಾಗೂ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

Related posts

ತೆಕ್ಕಾರು ಉಪ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಮನವಿ

Suddi Udaya

ಗುರುವಾಯನಕೆರೆ: ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್ ಆಯ್ಕೆ

Suddi Udaya

ಜಮಲಾಬಾದ್ ಕೋಟೆಗೆ(ಗಡಾಯಿ ಕಲ್ಲು) ರೋಪ್‌ವೇ ನಿರ್ಮಾಣಕ್ಕೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್ ರವರಿಗೆ ರಾಜ್ಯ ಸರಕಾರಿ ನೌಕರರ ಸಹಕಾರಿ ಸಂಘದಿಂದ ಅಭಿನಂದನೆ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಸೊಸೈಟಿಗೆ ಪ್ರೋತ್ಸಾಹಕ ಸಾಧನ ಪ್ರಶಸ್ತಿ

Suddi Udaya

ಬೆಳ್ತಂಗಡಿ ನಾರಾಯಣ ಗುರುಗಳ 172ನೇ ಗುರು ಜಯಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!