31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ

ಬೆಳ್ತಂಗಡಿ: ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ದಾದಿಯರ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಶ್ರಮದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಾನಂದ ಸ್ವಾಮಿ ಮಾತನಾಡಿ, ದಾದಿಯರ ಸೇವೆಯ ಮಹತ್ವವನ್ನು ವಿವರಿಸಿದರು.

ದಾದಿಯರು ಸಮಾಜದ ಆರೋಗ್ಯ ವ್ಯವಸ್ಥೆಯ ನಿಜವಾದ ಆಧಾರಸ್ತಂಭಗಳಾಗಿದ್ದು, ಅನಾರೋಗ್ಯ ಪೀಡಿತರ ಹಾಗೂ ಅಗತ್ಯವಿರುವವರ ಸೇವೆಯಲ್ಲಿ ಅಪಾರ ಸಹನೆ, ಪ್ರೀತಿ ಮತ್ತು ತ್ಯಾಗ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. “ದಾದಿಯರ ಸೇವೆ ಮಾನವೀಯತೆಯ ಪ್ರತಿರೂಪವಾಗಿದ್ದು, ಅವರ ಸೇವೆ ದೇವರ ಸೇವೆಗೆ ಸಮಾನ” ಎಂದು ಅವರು ಅಭಿಪ್ರಾಯಪಟ್ಟರು. ಅವರ ನಿರಂತರ ಸೇವೆ ಹಾಗೂ ಕಾಳಜಿಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ಸಿಬ್ಬಂದಿ ದಾದಿಯರನ್ನು ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಬಳಿಕ ಕೇಕ್ ಕತ್ತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಮಂಗಳೂರು ನರ್ಸಿಂಗ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

Related posts

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕಬ್ , ಬುಲ್ ಬುಲ್ ತೃತೀಯ ಚರಣ ಮತ್ತು ಸುವರ್ಣ ಗರಿ ಪರೀಕ್ಷೆ

Suddi Udaya

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಕುಕ್ಕೇಡಿ-ನಿಟ್ಟಡೆ ವತಿಯಿಂದ ನಿಟ್ಟಡೆ ದರ್ಖಾಸು ನಿವಾಸಿ ವಸಂತರವರ ವೈದ್ಯಕೀಯ ಚಿಕಿತ್ಸೆಗೆ ನೆರವು

Suddi Udaya

ಬೆಳ್ತಂಗಡಿ: ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ-ಸಾಧಕರಿಗೆ ಸನ್ಮಾನ, ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಿಂದ ನಿವೃತ್ತ ಶಿಕ್ಷಕ ದಿ| ದೇವಪ್ಪ ಗೌಡರಿಗೆ ಸಂತಾಪ

Suddi Udaya

ಕೊಕ್ಕಡ: ಸೆಲ್ಕೋ ಫೌಂಡೇಶನ್ ನಿಂದ 25 ಮಂದಿ ಅರ್ಹ ಫಲಾನುಭವಿಗಳಿಗೆ ಸೋಲಾರ್ ಕಿಟ್ ಗಳ ಹಸ್ತಾಂತರ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರರ 2ನೇ ವರ್ಷದ ಪುಣ್ಯಸ್ಮರಣೆ ;ಶ್ರೀ ಗುರುದೇವ ಸಹಕಾರಿ ಸಂಘ ಮತ್ತು ಶ್ರೀ ಗು.ನಾ.ಸ್ವಾ.ಸೇ ಸಂಘದಿಂದ ಸಿಯೋನ್ ಆಶ್ರಮದಲ್ಲಿ ಆಚರಣೆವಸಂತ ಬಂಗೇರರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು: ಭಗೀರಥ ಜಿ

Suddi Udaya
error: Content is protected !!