23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಬೆಳ್ತಂಗಡಿ: ಖಿಳರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಇದರ ವತಿಯಿಂದ ನೂತನ ಸ್ಮಾರ್ಟ್ ಕ್ಲಾಸ್ ಹಾಗೂ ಮದರಸ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮವು ಖಿಳರ್ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ಮೇ 13ರಂದು ನಡೆಯಿತು.

ದಾರುಸ್ಸಲಾಂ ಇದರ ಚೇರ್‌ಮನ್ ಝೈನುಲ್ ಆಬಿದ್ ಜೆಫ್ರಿ ತಂಙಳ್ ನೂತನ ಮದರಸ ಕೊಠಡಿಯನ್ನು ಉದ್ಘಾಟಿಸಿದರು. ಖತೀಬ್ ಹನೀಫ್ ಫೈಝಿ ಅವರು ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್ ನಾವೂರು ಅವರು, ಇಂದಿನ ಮಕ್ಕಳು ದಾರಿ ತಪ್ಪಲು ಪೋಷಕರು ಮತ್ತು ಮಕ್ಕಳ ನಡುವಿನ ದಿನನಿತ್ಯದ ಸಂಬಂಧ ಹಾಗೂ ಸಂವಹನದ ಕೊರತೆಯೂ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರಕ್ಕೆ ಪೋಷಕರು ಹೆಚ್ಚಿನ ಗಮನ ನೀಡಬೇಕೆಂದು ಅವರು ಕರೆ ನೀಡಿದರು.

ಹಯಾತುಲ್ ಇಸ್ಲಾಂ ಮದರಸದ ಅಧ್ಯಕ್ಷ ಬಿ. ಶೇಕುಂಞ್ಞ, ನಝೀರ್ ಬಿ.ಎ., ಬಿ.ಎಚ್ ರಝಕ್, ಫೈಝಲ್ ಐ.ಜೆ., ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ ಹಾಗೂ ಹೈದರ್ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಸ್ವಾಗತಿಸಿದರು. ಉಪಾಧ್ಯಾಯ ಅಬ್ದುಲ್ ರಹಮಾನ್ ಮದನಿ ವಂದಿಸಿದರು. ಶರೀಫ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Related posts

ಭರತನಾಟ್ಯ ಜೂನಿಯರ್ ಪರೀಕ್ಷೆ: ಧಾತ್ರಿ ಪಿ ನಾಲ್ಕೂರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಹೊಸಂಗಡಿ: ಪೆರಿಂಜೆ ಮಲಿಯಾಳ ಪಲ್ಕೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶಟಲ್ ಬ್ಯಾಡ್ಮಿಂಟನ್: ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ ಯರ್ಡೂರು ರಾಮನಗರದ ಮನೆಯೊಂದಕ್ಕೆಹಾಡುಹಗಲೇ ನುಗ್ಗಿದ ಕಳ್ಳರು: ರೂ.15 ಸಾವಿರ ನಗದು, 50 ಸಾವಿರ ಮೌಲ್ಯದ ಚಿನ್ನದ ಸರ ಕಳವು

Suddi Udaya

ಬೆಳ್ತಂಗಡಿ : ಮಕ್ಕಳ ಹಕ್ಕುಗಳ ಮಾಸೋತ್ಸವ ಉದ್ಘಾಟನೆ

Suddi Udaya

ಧರ್ಮಸ್ಥಳ: ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!