30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುವರದಿ

ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಭಾರತದ ಟಾಪ್ 100 ಜ್ಯುವೆಲ್ಲರಿ ಪಟ್ಟಿಯಲ್ಲಿ ಪುತ್ತೂರಿನ “ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್” ಗೆ ಸ್ಥಾನ

ಬೆಳ್ತಂಗಡಿ: ದಿ ಆರ್ಟ್ ಆಫ್ ಜ್ಯುವೆಲ್ಲರಿ (ಎಒಜೆ) ಮ್ಯಾಗಜೀನ್ 2025-26ರ ಅವಧಿಗೆ ಭಾರತದ ಅತ್ಯುತ್ತಮ 100 ಜ್ಯುವೆಲ್ಲರಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಪುತ್ತೂರು ಸಹಿತ ಹಲವು ಕಡೆ ಶಾಖೆಗಳನ್ನು ಹೊಂದಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಕೂಡಾ ಟಾಪ್ ಪಟ್ಟಿಗೆ ಸೇರಿದೆ.

ದಿ ಆರ್ಟ್ ಆಫ್ ಜ್ಯುವೆಲ್ಲರಿ ಸಂಚಿಕೆಯಲ್ಲಿ ಭಾರತದಲ್ಲಿ ಚಿನ್ನ ಮತ್ತು ಆಭರಣಗಳ ಉದ್ಯಮದಲ್ಲಿ ಸಾಧಕರನ್ನು ಗುರುತಿಸುತ್ತದೆ. ಈ ಭಾರಿ ಟಾಪ್ 100 ಚಿನ್ನದ ವ್ಯಾಪಾರಿಗಳನ್ನು ಆರ್ಥಿಕ ವರ್ಷದ 2025ರಲ್ಲಿ ಒಟ್ಟು ವ್ಯವಹಾರ, ಆದಾಯದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ಈ ಪಟ್ಟಿಯನ್ನು ಇಂಟ‌ರ್ ನ್ಯಾಷನಲ್ ಜಿಮೋಲಿಜಿಕಲ್ ಇನ್ ಸ್ಟಿಟ್ಯೂಟ್ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಚಿನ್ನಾಭರಣ ಮಳಿಗೆ ಟಾಪ್ 100 ಚಿನ್ನಾಭರಣಗಳ ಮಳಿಗೆಗಳ ಪೈಕಿ 85ನೇ ಸ್ಥಾನ ಪಡೆದುಕೊಂಡಿದೆ.

ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್ ಭಾರತದ ಆಭರಣ ಉದ್ಯಮದ ಪ್ರಮುಖ ಸುದ್ದಿ ಮತ್ತು ವಿಶ್ಲೇಷಣೆಗಳನ್ನು ಒದಗಿಸುವ ಪ್ರಮುಖ ಮಾಧ್ಯಮವಾಗಿದೆ. ಜ್ಯುವೆಲ್ಲರಿಗಳ ಒಟ್ಟು ವ್ಯವಹಾರದಲ್ಲಿ ಈ ಆಯ್ಕೆ ನಡೆಯುತ್ತದೆ. ನಮ್ಮ ಸಂಸ್ಥೆಗೆ 85ನೇ ಸ್ಥಾನ ಲಭಿಸಿದೆ ಎಂದು ಮುಳಿಯ ಗೋಲ್ಡ್ ಆಂಡ್ ಡೈಮಂಡ್‌ ಮಳಿಗೆಯ ಚೆಯರ್‌ಮೆನ್ ಕೇಶವಪ್ರಸಾದ್ ಮುಳಿಯ ಮತ್ತು ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಡಿ.17: ನಾರಾವಿ ಎನ್ ಎಸ್ ಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ನೆರಿಯ ವಲಯದ ಭಜನಾ ಪರಿಷತ್ತಿನ ಸಭೆ

Suddi Udaya

ಧರ್ಮಸ್ಥಳ ಮುಖ್ಯ ದ್ವಾರದ ಬಳಿ ಪಾರ್ಕ್ ಮಾಡಿದ ದ್ವಿಚಕ್ರ ವಾಹನ ಕಳವು

Suddi Udaya

ಉಜಿರೆ: ಎಸ್. ಡಿ. ಎಂ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

Suddi Udaya

ಸವಣಾಲು: ಸಾಂತಪ್ಪ ಮಲೆಕುಡಿಯ ನಿಧನ

Suddi Udaya

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya
error: Content is protected !!