25.2 C
ಪುತ್ತೂರು, ಬೆಳ್ತಂಗಡಿ
August 30, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ 2012 ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ನ್ಯಾಯಲಯ CC No.3221/2018 ಕಲಂ- 379..201 IPC & 98 KP ACT ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದ ವಾರಂಟ್ ಆರೋಪಿ ಆಂದ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ರೊಲ್ಲ ಗ್ರಾಮದ ನಿವಾಸಿ ರಂಗನಾಥಪ್ಪ ಎಂಬವರ ಮಗನಾದ ರಂಗನಾಥ್(36) ಎಂಬಾತ ಕಳೆದ ಸುಮಾರು 10 ವರ್ಷಗಳಿಂದ ತಲೆ ಆರೋಪಿಯನ್ನು ಮೇ.25 ರಂದು ಆಂಧ್ರಪ್ರದೇಶದ ಸತ್ಯಶಾಯಿ ಜಿಲ್ಲೆಯಲ್ಲಿ ಮೇ.25 ರಂದು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಮೇ.26 ರಂದು ಸಂಜೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ, ಪೊಲೀಸ್ ನಿರೀಕ್ಷಕರು ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪ ನೀರಿಕ್ಷಕರಾದ ಆನಂದ ಮತ್ತು ಸಿಕಂದರ್ ಪಾಷಾ ನೇತೃತ್ವದ ಸಿಬ್ಬಂದಿ ಮಾಲತೇಶ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಚಾಕು ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.*ಆರೋಪಿ ವಿರುದ್ಧ ಪ್ರಕರಣ:* ತಿರುಪತಿಯಲ್ಲಿ ಎರಡು ಪ್ರಕರಣ, ತಮಿಳುನಾಡಿನಲ್ಲಿ ನಾಲ್ಕು ಪ್ರಕರಣ, ಕೇರಳದಲ್ಲಿ ಎರಡು ಪ್ರಕರಣ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012 ರಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಕಳ್ಳತನ ಒಂದು ಪ್ರಕರಣ ದಾಖಲಾಗಿದೆ.

Related posts

ಅಂತರ್ ಕಾಲೇಜು ಚರ್ಚಾ ಸ್ಪರ್ಧೆ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಫಾತಿಮಾತ್ ರಾಫಿಯಾ ರಿಗೆ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ: ಬುರುಡೆ ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ ಸೆ.16 ಕ್ಕೆ ಬೆಲ್ ಅದೇಶ ಕಾಯ್ದಿರಿಸಿದ ಬೆಳ್ತಂಗಡಿ ಕೋರ್ಟ್

Suddi Udaya

ಇಲಂತಿಲ ಗ್ರಾ.ಪಂ. ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆಯಲ್ಲಿ ಸರಣಿ ಅಪಘಾತ, ಐದು ವಾಹನಗಳು ಜಖಂ

Suddi Udaya

ನಿಟ್ಟಡೆ: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಪಿಕಪ್‌ ವಾಹನ ವಶ

Suddi Udaya

ಜಠರ ಮತ್ತು ಪಿತ್ತಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಕಾಶಿಪಟ್ಣದ ದೀಪಕ್ ಕೆ ಸಾಲ್ಯಾನ್ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!