31.2 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ವೃತ್ತಿಯೊಂದಿಗಿನ ಜೀವನದ ಸುಮತೋಲನ” ಕಾರ್ಯಾಗಾರ

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ “ವೃತ್ತಿಯೊಂದಿಗಿನ ಜೀವನದ ಸಮತೋಲನ” ಎಂಬ ವಿಷಯದ ಕುರಿತು ಎಸ್‌.ಡಿ.ಎಂ ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಅಕಾಡೆಮಿಯ ಸಾಫ್ಟ್‌ಸ್ಕಿಲ್ ಡೆವಲಪ್‌ಮೆಂಟ್ ತರಬೇತುದಾರ ಡಾ.ಸಿಜು ಥಾಮಸ್ ವಿಷಯದ ಕುರಿತಾಗಿ ಚಟುವಟಿಕೆಗಳೊಂದಿಗೆ ಮಾಹಿತಿ ಹಂಚಿಕೊಂಡರು.

ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟಿ ಡಾ.ಹರೀಶ್ ಕೃಷ್ಣಸ್ವಾಮಿ ಕಾರ್ಯಾಗಾರದ ಉದ್ಘಾಟನೆ ಮಾಡಿ ಶುಭಕೋರಿದರು.

ಶಾಲಾ ಪ್ರಾಂಶುಪಾಲ ಮನಮೋಹನ್ ನಾಯ್ಕ್ ಕೆ.ಜಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಗಾರದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ.ಎಸ್, ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಎಸ್.ಡಿ.ಎಮ್ ಪದವಿ ಕಾಲೇಜಿನ ಪ್ರಾಂಶುಪಾಲರು ಡಾ. ವಿಶ್ವನಾಥ್.ಪಿ, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸಂಯೋಜಕರು ಡಾ.ಎಸ್.ಎನ್ ಕಾಕತ್ಕರ್, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ಮಂಗಳೂರಿನ ಆಕ್ಸ್ಫರ್ಡ್ ವಲಯ ವ್ಯವಸ್ಥಾಪಕರು ಸುಜಿತ್ ಹಾಗೂ ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಜಾಯ್ ಜೀವನ್ ರೈ ಉಪಸ್ಥಿತರಿದ್ದರು.

ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

ಶಿಕ್ಷಕಿಯರಾದ ನೀತು ಪ್ರಸಾದ್ ಹಾಗೂ ಕಲ್ಯಾಣಿ. ಎಮ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ಆ.15ರಿಂದ ಶೃಂಗೇರಿಯ ಶಾರದಾಂಬೆ ದರ್ಶನಕ್ಕೆ ‘ವಸ್ತ್ರ ಸಂಹಿತೆ’ ಜಾರಿ!

Suddi Udaya

ಧರ್ಮಸ್ಥಳ : ಇಬ್ಬರು ಸರಕಳ್ಳಿಯರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಕುವೆಟ್ಟು : ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಮಾಡಿಸಿಕೊಡುವ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ನೆರಿಯದಲ್ಲಿ ಅಟಲ್ ವಿರಾಸತ್ ಜನ್ಮ ಶತಾಬ್ದಿ ಪ್ರಯುಕ್ತ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರಿಂದ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ: ವಿವಿಧ ಸೇತುವೆ ರಚನೆ ಕಾಮಗಾರಿಗಳಿಗೆ ರೂ. 6 ಕೋಟಿ 25 ಲಕ್ಷ ಅನುದಾನ ಸರ್ಕಾರದಿಂದ ಮಂಜೂರು: ರಕ್ಷಿತ್ ಶಿವರಾಮ್

Suddi Udaya

ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

Suddi Udaya
error: Content is protected !!