32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಪೆರಾಲ್ದರಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ಪೆರಾಲ್ದರಕಟ್ಟೆ: ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆಯಲ್ಲಿ ಬಕ್ರೀದ್ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಮಸೀದಿಯಲ್ಲಿ ನಡೆದ ವಿಶೇಷ ಬಕ್ರೀದ್ ನಮಾಜ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾತ್ ಬಾಂಧವರು ಭಾಗವಹಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಸಂಶುದ್ದೀನ್ ದಾರಿಮಿ ವಹಿಸಿ, ಹಬ್ಬದ ಮಹತ್ವ, ತ್ಯಾಗ ಹಾಗೂ ಸಹೋದರತ್ವದ ಸಂದೇಶವನ್ನು ನೀಡಿದರು.

ಮಸೀದಿ ಕಮಿಟಿಯ ಅಧ್ಯಕ್ಷ ನವಾಝ್ ಕಟ್ಟೆ, ಕಾರ್ಯದರ್ಶಿ ಸ್ವಾದೀಕ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ, ದುಆ ಹಾಗೂ ಸಮಾಜದ ಶಾಂತಿ-ಸೌಹಾರ್ದಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಧಾರ್ಮಿಕ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Related posts

ಉಜಿರೆ: ವಿದ್ಯಾನಗರ ನಿವಾಸಿ ಗೀತಾ ಆಚಾರ್ಯ ನಿಧನ

Suddi Udaya

ಮಾ.15: ಅಳದಂಗಡಿ ನೊಚ್ಚ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Suddi Udaya

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಅಂತಾರಾಷ್ಟ್ರೀಯ “ಏಷಿಯಾ ಪೆಸಿಫಿಕ್ ಐಕಾನ್ ಅವಾರ್ಡ್ಸ್”

Suddi Udaya

ಮಚ್ಚಿನ ಗ್ರಾಮದ ಬಸ್ ನಿಲ್ದಾಣಗಳ ದುಸ್ಥಿತಿ: ಸಾರ್ವಜನಿಕರ ಪರದಾಟ

Suddi Udaya

ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಸೈಯ್ಯದ್ ಮಹಮ್ಮದ್ ಉವೈಸ್ ಪ್ರಥಮ ಸ್ಥಾನ

Suddi Udaya

ಹೊಸ್ತೋಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!