25.1 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಉಮಾ ಡಿ. ಗೌಡ ಹಟ್ಟತ್ತೋಡಿ ಸೇವಾ ನಿವೃತ್ತಿ

ಬೆಳ್ತಂಗಡಿ: ಗುರುವಾಯನಕೆರೆ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಮಾ ಡಿ. ಗೌಡ ಹಟ್ಟತ್ತೋಡಿ ಇವರು ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ 32 ವರ್ಷಗಳ ಕಾಲ ಪ್ರಾಮಾಣಿಕವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಎಲ್ಲಾ ವಿದ್ಯಾರ್ಥಿಗಳ ಹಾಗೂ ಪೋಷಕರ ಹಿರಿಯ ವಿದ್ಯಾರ್ಥಿಗಳ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ ಶಿಕ್ಷಕ ವೃತ್ತಿಯಿಂದ ಮೇ 31 ರಂದು ನಿವೃತ್ತಿಗೊಳ್ಳಲಿರುವರು.

ಇವರು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಟಿಸಿಎಚ್ ತರಬೇತಿ ಪಡೆದು 1994 ರಲ್ಲಿ ಸ.ಹಿ. ಪ್ರಾ. ಶಾಲೆ ಕುಂಜತ್ತೋಡಿ ಬೆಳ್ತಂಗಡಿ ತಾಲೂಕು ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ 19 ವರ್ಷ ಸೇವೆ ಸಲ್ಲಿಸಿ, ಬಂಟ್ವಾಳ ತಾಲೂಕು ಪಾಂಡವರಕಲ್ಲು ಶಾಲೆಯಲ್ಲಿ 3 ವರ್ಷ, ಬಂಟ್ವಾಳ ತಾಲ್ಲೂಕಿನ ಕೆದ್ದಳಿಕೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ 6 ವರ್ಷ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಸ. ಹಿ. ಪ್ರಾ. ಶಾಲೆ ಗುರುವಾಯನಕೆರೆಯಲ್ಲಿ 4 ವರ್ಷ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮೇ 31 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ಇವರಿಗೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಸಂಘ , ದಕ್ಷಿಣ ಕನ್ನಡ ವತಿಯಿಂದ ಬೋಧಕರ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಜಿಲ್ಲಾಮಟ್ಟದ “ವಿದ್ಯಾರತ್ನ” ಪ್ರಶಸ್ತಿ ಲಭಿಸಿರುತ್ತದೆ.
ಇವರು ಪತಿ ನಿವೃತ್ತ ಮುಖ್ಯೋಪಾಧ್ಯಾಯರಾದ ಹೆಚ್. ಧರ್ಣಪ್ಪ ಗೌಡ ಹಟ್ಟತ್ತೋಡಿ, ಪುತ್ರ ಮೂಡಬಿದ್ರೆ ಎಸ್‌ಕೆಎಫ್ ಎಲಿಕ್ಸಿರ್ ಇಂಡಿಯಾ ಪ್ರೆ.ಲಿ. ಇಂಜಿನಿಯರ್ ಆದ ಆದರ್ಶ್ ಹಟ್ಟತ್ತೋಡಿ, ಸೊಸೆ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಉಪನ್ಯಾಸಕಿ ಶಿಲ್ಪಾ ಆದರ್ಶ ರವರೊಂದಿಗೆ ಪುಂಜಾಲಕಟ್ಟೆ ಹಟ್ಟತ್ತೋಡಿ ಎಂಬಲ್ಲಿ ವಾಸವಾಗಿದ್ದರೆ. ಪುತ್ರಿ ಫ್ಯಾಷನ್ ಡಿಸೈನರ್ ಅನುಷಾ ಅವಿನಾಶ್, ಇವರ ಕುಟುಂಬದಲ್ಲಿ ಒಟ್ಟು 13 ಜನ ಶಿಕ್ಷಕ ವೃತ್ತಿಯನ್ನು ಅವಲಂಬಿಸಿರುತ್ತಾರೆ.

Related posts

ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಧರ್ಮಸ್ಥಳ: ಕು. ಸೌಜನ್ಯ ಮನೆಗೆ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್‌.ರಾಹುಲ್ ಭೇಟಿ

Suddi Udaya

ಭಾರೀ ಮಳೆ: ಮುಂಡೂರುನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ: ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ; ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೈಕ್ಷಣಿಕ ಪ್ರಗತಿ- ಮಿಂಚಿನ ಸಂಚಾರ ಇಲಾಖಾ ತಂಡ ಭೇಟಿ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೊ ಸ್ಕೂಲ್ “ಲುಮಿನ್ಯಾ” ಪ್ರಾರಂಭೋತ್ಸವ ಆರಂಭ, ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya
error: Content is protected !!