September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮಚ್ಚಿನದಲ್ಲಿ ಪಾಲು ಬಿದ್ದ ಹಿರಿಯ ಆರೋಗ್ಯ ಸಹಾಯಕಿ ವಸತಿಗೃಹ: ಸ್ವತ್ತುಗಳು ಕಳ್ಳರ ಪಾಲು

ಮಚ್ಚಿನ: ಇಲ್ಲಿಯ ಸರಕಾರಿ ಶಾಲೆಯ ಹತ್ತಿರ ಇರುವ ಕಿರಿಯ ಆರೋಗ್ಯ ಸಹಾಯಕಿ ಉಪ ಕೇಂದ್ರದ ವಸತಿಗೃಹ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡು ಆರೋಗ್ಯ ಸಹಾಯಕಿಯರು ರಾತ್ರಿ ಹಗಲು ಎನ್ನದೆ ಈ ಕಟ್ಟಡದಲ್ಲಿ ಜನರಿಗೆ ಸೇವೆಯನ್ನು ನೀಡುತ್ತಿದ್ದರು ಆದರೆ ಮಚ್ಚಿನ ಗ್ರಾಮಕ್ಕೆ ಸರಕಾರಿ ಆಸ್ಪತ್ರೆಯ ಮಂಜೂರುಗೊಂಡು ಗ್ರಾಮ ಪಂಚಾಯತಿಯ ಕಿರಿದಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇತ್ತೀಚೆಗೆ ಗ್ರಾಮ ಪಂಚಾಯತಿ ಆರೋಗ್ಯ ಇಲಾಖೆ, ಊರ ಜನರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನೂತನ ಕಟ್ಟಡದ ಮಂಜೂರುಗೊಂಡು ಕಟ್ಟಡದ ಕೆಲಸಗಳು ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಆದರೆ ಈ ಹಳೆಯ ಕಟ್ಟಡದ ಬಾಗಿಲುಗಲು ತುಕ್ಕು ಹಿಡಿದು ಹೋಗಿದ್ದು ಇದರ ಒಳಗಿರುವ ವಸ್ತುಗಳು ನೀರಿನ ಟ್ಯಾಂಕಿ, ಕಪಾಟುಗಳು, ಮೇಜುಗಳು ಇನ್ನಿತರ ವಸ್ತುಗಳು ಕಳ್ಳರ ಪಾಲಾಗುತ್ತಿದೆ. ಅದಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಈ ಕಟ್ಟಡದ ಸುತ್ತಮುತ್ತ ಪೊದೆ ಬಳ್ಳಿಗಳು ತುಂಬಿ ಕಟ್ಟಡ ಮಾಯವಾಗುವಂತಿದೆ. ಮೂಲಸೌಕರ್ಯಗಳನ್ನು ಒಳಗೊಂಡ ಈ ಕಟ್ಟಡ ಮಳೆಗೆ ನೆಲಸಮಗೊಳ್ಳುವ ಮುನ್ನ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಈ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
✍️ ವರದಿ: ಹರ್ಷ ಬಳ್ಳಮಂಜ

Related posts

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಮಕರಸಂಕ್ರಾಂತಿ ಆಚರಣೆ

Suddi Udaya

ಗಾಯಕರಾದ ಕ್ಷಿತಿ ಕೆ.ರೈ ಮತ್ತು ಶ್ರೇಷ್ಠ ಆಳ್ವ ರಿಗೆ ಆಮಂತ್ರಣ ಸತ್ಯಶ್ರೀ ಗೌರವ ಪುರಸ್ಕಾರ

Suddi Udaya

ಭಕ್ತಿ ಪಾರಮ್ಯಕ್ಕೆ ಅಣಿಯಾದ ಮಲೆಂಗಲ್ಲು ಬ್ರಹ್ಮಕಲಶೋತ್ಸವ

Suddi Udaya

ಕುತ್ಲೂರು: ಅಡಿಕೆ ಬೆಳೆ ಕೊಳೆರೋಗ ನಿಯಂತ್ರಣ, ಎಲೆಚುಕ್ಕಿ ರೋಗದ ಬಗ್ಗೆ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಬಳಂಜ: ನಿಧನರಾದ ಮಾಜಿ ಶಾಸಕ ಕೆ.ವಸಂತ ಬಂಗೇರರವರಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ನುಡಿ ನಮನ ಅರ್ಪಣೆ

Suddi Udaya

ಕಕ್ಯಪದವು ಲಾವಣ್ಯ ಹತ್ಯೆ ಆರೋಪಿಗೆ ನ್ಯಾಯಾಂಗ ಬಂಧನ

Suddi Udaya
error: Content is protected !!