26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ವತಿಯಿಂದ ಸವಣಾಲು ಅ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಬೆಳ್ತಂಗಡಿ: ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ವತಿಯಿಂದ ಶಾಲೆಯ ಸುಮಾರು 35 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಾಲಾ ಬ್ಯಾಗುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಳಿಯ ಜ್ಯುವೆಲ್ಲರ್ಸ್ ಸಿಬ್ಬಂದಿಗಳಾದ ಕು|ಜಯಲಕ್ಷ್ಮೀ , ಕೃಷ್ಣಪ್ಪ, ಅಭಿಷೇಕ್ ,ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕೂಸಪ್ಪ ಗೌಡ, ಸದಸ್ಯರಾದ ಶಿವಪ್ರಸಾದ್ ಕೆ ಮತ್ತು ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

ಈ ವೇಳೆ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಜಿ ಮಂಜುನಾಥ ರವರು ಗ್ರಾಮೀಣ ಶಾಲೆಯ ಮಕ್ಕಳಿಗೆ ಗುಣಮಟ್ಟದ ಬ್ಯಾಗುಗಳನ್ನು ನೀಡುವುದರ ಮೂಲಕ ಮುಳಿಯ ಜ್ಯುವೆಲ್ಲರ್ಸ್ ಬೆಳ್ತಂಗಡಿ ಇವರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವುದರೊಂದಿಗೆ ತಮ್ಮ ಔದಾರ್ಯ ಮತ್ತು ಉಪಕಾರದ ಗುಣವನ್ನು ಸಾಕ್ಷೀಕರಿಸಿದರು ಎಂದರು.

Related posts

ಬಂದಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಮಹಾಶಿವರಾತ್ರಿಯ ಪ್ರಯಕ್ತ: ಫೆ.15,16 ರಂದು ಕೆ.ಎಸ್.ಆರ್ ಟಿ.ಸಿ ಬಸ್ ಸಂಚಾರದಲ್ಲಿ ವ್ಯತ್ಯಯ

Suddi Udaya

ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ – 8: ನಿರಂಜನ್ ಜೈನ್ ಕುದ್ಯಾಡಿ ಅವರ ರಚನೆಯ ಬೆಳಗಾವಿಯ ವಿಶಾರದಾ ನೃತ್ಯ ತಂಡ ಪ್ರಥಮ ಸ್ಥಾನ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಒವರಂ ಕ್ರಿಕೆಟ್ ಪಂದ್ಯಾಟ “ರಾಜಕೇಸರಿ ರತ್ನ ಟ್ರೋಫಿ”

Suddi Udaya

ಬೆಳ್ತಂಗಡಿ ನಗರದಲ್ಲಿ ರೂ.40 ಲಕ್ಷ ವೆಚ್ಚದ ಹಿಂದೂ ರುದ್ರಭೂಮಿ ಲೋಕಾರ್ಪಣೆ

Suddi Udaya
error: Content is protected !!