September 24, 2026
ಆರೋಗ್ಯಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ.ಮಂ.ಪ ಪೂ.ಕಾಲೇಜು: ವಿಶ್ವ ಯೋಗ ದಿನಾಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ 12ನೇ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು . ಕಾರ್ಯಕ್ರಮವನ್ನು ಉಜಿರೆ ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಹರ್ಷಿಣಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ” ಯೋಗ ಮನಸ್ಸನ್ನು ಹತೋಟಿಯಲ್ಲಿ ಇಡಲು ಸಹಕಾರಿ. ವಿದ್ಯಾರ್ಥಿಗಳು ದಿನ ನಿತ್ಯ ಯೋಗ ಮಾಡುವುದರಿಂದ ಏಕಾಗ್ರತೆ ಮೂಡಿಸಿ ಓದಿನಲ್ಲೂ ಯಶಸ್ವಿಯಾಗಲು ಸಾಧ್ಯ. ಜೊತೆಗೆ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬಹುದು “ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ ರವರು ಮಾತನಾಡಿ ” ಯೋಗ ದಿನ ಯೋಗದ ಮಹತ್ವ ತಿಳಿಸುವ ದಿನ ಮಾತ್ರ. ಪ್ರತಿ ನಿತ್ಯ ಯೋಗ ಮಾಡಿದಾಗ ಅದರ ನಿಜವಾದ ಮಹತ್ವದ ಅನುಭವ ಆಗಲು ಸಾಧ್ಯ. ಏಕೆಂದರೆ ಅರೋಗ್ಯವಂತ ಜೀವನಕ್ಕೆ ಯೋಗ ಅತ್ಯಮೂಲ್ಯವಾದುದು.” ಎಂದು ಹೇಳಿದರು.
ಸ್ವಯಂ ಸೇವಕ ಸಾಕೇತ್ ಯೋಗ ದಿನದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ. ಉಪಸ್ಥಿತರಿದ್ದರು.

ಉಜಿರೆ ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಡಾ. ಅತುಲಾ, ಡಾ. ಶಿವರಾಜ್, ಡಾ. ವಿವೇಕ್ ಸ್ವಯಂ ಸೇವಕರಿಗೆ ಯೋಗ ಶಿಬಿರ ನಡೆಸಿಕೊಟ್ಟರು. ಸ್ವಯಂ ಸೇವಕಿಯರಾದ ಸುಪೇಕ್ಷಾ ನಿರೂಪಿಸಿ ಶ್ರೇಯ ಸ್ವಾಗತಿಸಿ ಅನ್ವಿತಾ ವಂದಿಸಿದರು.

Related posts

ವಾಣಿ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ತ್ರೋಬಾಲ್ ಸ್ಪರ್ಧೆ: ಮಚ್ಚಿನ ಸರಕಾರಿ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರಿಗೆ ದ್ವಿತೀಯ ಸ್ಥಾನ

Suddi Udaya

ಬಳಂಜ ಶಾಲಾ ವಿದ್ಯಾರ್ಥಿಗಳನ್ನು ಪಿಕಪ್-ಟಿಪ್ಪರ್ ನಲ್ಲಿ ವಿಹಾರಕ್ಕೆ ಕರೆದೊಯ್ದ ಶಿಕ್ಷಕ: ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ಕರೆದೊಯ್ದ ಶಿಕ್ಷಕನ ವಿರುದ್ಧ ಪೋಷಕರ ಅಸಮಾಧಾನ

Suddi Udaya

ಎಸ್‌ಡಿಎಂ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಉದಯೋನ್ಮುಖ ಪ್ರತಿಭೆ ಬಹುಮಾನ

Suddi Udaya

ತುಳು ಸಾಹಿತ್ಯ ಅಕಾಡೆಮಿಯಲ್ಲಿ ಪ್ರಶಸ್ತಿ ವಿತರಣೆ ಶಿಕ್ಷಕಿಗೆ ಸನ್ಮಾನ

Suddi Udaya

ಮುಂಡಾಜೆ ಶಿಕ್ಷಣ ಸಂಸ್ಥೆಯ ವೆಬ್ ಸೈಟ್ ಉದ್ಘಾಟನೆ ಮತ್ತು ದೀಪ ಪ್ರದಾನ ಕಾರ್ಯಕ್ರಮ

Suddi Udaya
error: Content is protected !!