September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮರಿಯಾಂಬಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆದ್ರಬೆಟ್ಟು: ಬೆದ್ರಬೆಟ್ಟುವಿನ ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 12ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಶಾಲೆಯ ಮ್ಯಾನೇಜರ್ ರೆ. ಫಾ. ಮ್ಯಾಥ್ಯು ಶುಭ ಹಾರೈಸಿ, ಯೋಗ ದಿನಾಚರಣೆಯ ಹಾಗೂ ಜೀವನದಲ್ಲಿ ಯೋಗದ ಮಹತ್ವವನ್ನು ತಮ್ಮ ಸಂದೇಶದಲ್ಲಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳ ಪರವಾಗಿ ವೈಷ್ಣವಿ (9ನೇ ತರಗತಿ), ಶಿಕ್ಷಕರ ಪರವಾಗಿ ಸಹ ಶಿಕ್ಷಕಿ ಶ್ರೀಮತಿ ಶೀಲಾ ಇವರು ಯೋಗ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.

ಶಾಲಾ ಮುಖೋಪಾಧ್ಯಾಯಿನಿ ರೆ. ಸಿ . ಲೀನಾ ಇವರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕಿ ಕುಮಾರಿ ವಿಜೇತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಇವರ ಸಹಕಾರದಲ್ಲಿ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಯಿತು. ವಿದ್ಯಾರ್ಥಿಗಳೆಲ್ಲರೂ ಸಂತೋಷದಿಂದ ಯೋಗಾಭ್ಯಾಸವನ್ನು ಸಂಭ್ರಮಿಸಿಕೊಂಡರು.


ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮ ಆರಂಭಗೊಂಡಿತು. ಸಹ ಶಿಕ್ಷಕಿ ಶ್ರೀಮತಿ ಭವ್ಯ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಉಜಿರೆ ಕಾಲೇಜಿನ ವಿದ್ಯಾರ್ಥಿ ವಿನುತಾ ಆರ್. ನಾಯ್ಕ್ ಆಯ್ಕೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ :ಮೈರೋಳ್ತಡ್ಕದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

Suddi Udaya

ಮೇ 17: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿಸ್ತೃತ ಶೋರೂಂ ಉದ್ಘಾಟನೆ: ಮುಳಿಯ ಬ್ರ್ಯಾಂಡ್ ಅಂಬಾಸಿಡರ್ ರಮೇಶ್ ಅರವಿಂದ್‌ರಿಂದ ಲೋಕಾರ್ಪಣೆ

Suddi Udaya

KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ಮಾ.18ರಿಂದ ವಿದ್ವತ್‌ ಕಾಲೇಜಿನಲ್ಲಿ ಕ್ರ್ಯಾಶ್ ಕೋರ್ಸ್ ಆರಂಭ

Suddi Udaya

ಕೊಕ್ಕಡ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!